ಅಂಕಣಗಳುಪ್ರಮುಖ ಸುದ್ದಿವಾರ್ತೆ

ಮಧುಮೇಹದಿಂದ ಬರುವ ಹೃದಯದ ತೊಂದರೆಗಳಿಗೆ ಔಷಧೀಯ ಸಸ್ಯಗಳು

ಅಂಕಣ: ಡಾ.ಸತೀಶ ಶಂಕರ್ ಬಿ
ಅರ್ಜುನ:
ಇದು 20-25 ಮೀಟರ್ ಎತ್ತರ ಬೆಳೆಯುವ ಮರ. ಇದು ಹೃದಯಕ್ಕೆ ಅತ್ಯುತ್ತಮ ಔಷಧಿ. ಎಲ್ಲಾ ಹೃದಯ ಸಂಬಂಧಿ ರೋಗಗಳಲ್ಲಿ ಪ್ರಯೋಜನಕಾರಿ. ಅರ್ಜುನದ ತೊಗಟೆಯನ್ನು ಉಪಯೋಗಿಸಲಾಗುತ್ತದೆ. ಇದು ಭಾರತದಾದ್ಯಂತ ಬೆಳೆಯುತ್ತದೆ. ಇದರ ತೊಗಟೆಯ ಹುಡಿ(ಚೂರ್ಣ)3-6ಗ್ರಾಂ ಉಪಯೋಗಿಸಬಹುದು ಅಥವಾ ಕಷಾಯ 50-100ಎಂ ಎಲ್ ನಿತ್ಯವೂ ಸೇವಿಸಿದರೆ ಹೃದಯವನ್ನು ಖಾಯಿಲೆಗಳನ್ನು ತಡೆಗಟ್ಟಬಹುದು. ಇದು ಕೊಲೆಸ್ಟರಾಲ್ ನ್ನು ಕೂಡ ಕಡಿಮೆಗೊಳಿಸುತ್ತದೆ. ಮಧುಮೇಹದಿಂದ ಹೃದಯಸ್ತಂಭನದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಅರ್ಜುನ ಕಷಾಯ ಅಥವಾ ಹುಡಿ ನಿತ್ಯವೂ ಸೇವಿಸುವುದರಿಂದ ಹೃದಯದ ತೊಂದರೆಗಳನ್ನು ತಡೆಗಟ್ಟಬಹುದು.
 
 
ಪುಷ್ಕರಮೂಲ:
ಇದು ಹೃದಯದ ತೊಂದರೆಗಳನ್ನು ತಡೆಗಟ್ಟುತ್ತದೆ. ಶ್ವಾಸಕೋಶದ ತೊಂದರೆಗಳನ್ನು ನಿವಾರಿಸುತ್ತದೆ. ಮಧುಮೇಹದಿಂದ ಬರುವ ಹೃದಯದ ತೊಂದರೆಗಳನ್ನು ನಿವಾರಿಸಲು ಇದರ ಬೇರಿನ ಹುಡಿಯನ್ನು 1-3 ಗ್ರಾಂ ಜೇನಿನೊಂದಿಗೆ ಸೇವಿಸಬೇಕು.
ಶ್ವಾಸಕೋಶದ ಅಥವಾ ಉಸಿರಾಟದ ತೊಂದರೆಗಳಲ್ಲಿ ಪುಷ್ಕರಮೂಲದ ಹುಡಿಯನ್ನು ದಶಮೂಲ ಕಷಾಯದೊಂದಿಗೆ ಸೇವಿಸಬೇಕು.
ಪುಷ್ಕರ ಮೂಲ ಹೃದಯವನ್ನು ರಕ್ಷಿಸುವಲ್ಲಿ ಸಹಕಾರಿ. ಸಾಮಾನ್ಯವಾಗಿ ಹೃದಯದ ತೊಂದರೆಗಳಲ್ಲಿ ಉಸಿರಾಟದ ಸಮಸ್ಯೆ ಕಂಡುಬರುತ್ತದೆ. ಪುಷ್ಕರಮೂಲ ಉಸಿರಾಟದ ಸಮಸ್ಯೆಯನ್ನು ನಿವಾರಿಸುತ್ತದೆ.
 
 
 
ವೃಕ್ಷಾಮ್ಲ(ಪುನರ್ಪುಳಿ)
ಕೋಕಂ ಎಂದು ಪ್ರಸಿದ್ಧಿಯಾಗಿರುವ ವೃಕ್ಷಾಮ್ಲ ಹೃದಯದ ತೊಂದರೆಗಳಿಗೆ ರಾಮಬಾಣವಿದ್ದಂತೆ. ಇದರ ಹಣ್ಣಿನ ಜ್ಯೂಸ್ 20 ಅಥವಾ ಇದರ ಬೇರಿನ ತೊಗಟೆಯಿಂದ ತಯಾರಿಸಿದ ಕಷಾಯ 40 ಎಂಎಲ್ ನಿತ್ಯವೂ ಸೇವಿಸಿದರೆ ಹೃದಯದ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿ.
ಹೃದಯದ ತೊಂದರೆಗಳಲ್ಲಿ
1)ಹಣ್ಣಿನ ಸಿರಪ್- 10-20ಎಂಎಲ್
2) ಬೇರಿನ ತೊಗಟೆಯಿಂದ ತಯಾರಿಸಿದ ಕಷಾಯ-40 ಎಂ ಎಲ್
ಇದು ಜೀರ್ಣಶಕ್ತಿಯನ್ನು ವೃದ್ಧಿಸುವಲ್ಲಿ ಸಹಕಾರಿ. ಮೂಲವ್ಯಾಧಿಯಲ್ಲಿ ಇದು ಉತ್ತಮ.
ಡಾ.ಸತೀಶ ಶಂಕರ್ ಬಿ
[email protected]

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here