ಮಧುಮೇಹದಿಂದ ಬರುವ ಲೈಂಗಿಕ ಸಮಸ್ಯೆಗಳಿಗೆ ಔಷಧೀಯ ಸಸ್ಯಗಳು

0
780

ಡಾ.ಸತೀಶ್ ಶಂಕರ್ ಬಿ.
ಅಶ್ವಗಂಧ:
ಮಧುಮೇಹದಿಂದ ಪುರುಷರಲ್ಲಿ ನಿಮಿರುವಿಕೆಯಲ್ಲಿ ಸಮಸ್ಯೆ ತಲೆದೋರುತ್ತದೆ. ನರಗಳ ಶಕ್ತಿಹೀನತೆಯಿಂದ ಈ ಸಮಸ್ಯೆ ಕಾಣಿಸುತ್ತದೆ. ಅಶ್ವಗಂಧ ಈ ಸಮಸ್ಯೆಗೆ ಉತ್ತಮ ಪರಿಹಾರ ಒದಗಿಸಬಲ್ಲುದು. ಅಶ್ವಗಂಧ ಮೂಲದ(ಬೇರಿನ) ಹುಡಿಯನ್ನು 3-6 ಗ್ರಾಂ.ನಷ್ಟು ನಿತ್ಯವೂ ಹಾಲಿನೊಂದಿಗೆ ಸೇವಿಸಿದರೆ ನಿಮಿರು ದೌರ್ಬಲ್ಯ ಶಮನವಾಗುವುದು. ಅಶ್ವಗಂಧ ವೀರ್ಯದ ಪ್ರಮಾಣವನ್ನು ಹೆಚ್ಚುಗೊಳಿಸುತ್ತದೆ. ಇದರಿಂದ ಪುರುಷರಲ್ಲಿ ಕಂಡುಬರುವ ವೀರ್ಯದ ಕೊರತೆಯನ್ನು ಪರಿಹರಿಸುವಲ್ಲಿಯೂ ಸಹಕಾರಿ.
ಕಪಿಕಚ್ಚು(ನಾಯಿ-ಸೊಡಂಕು)
ಇದು ಮರ್ಕಟ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ. ಇದರ ಬೀಜ ವಾಜೀಕರಣ ಗುಣ ಹೊಂದಿದೆ. ಇದರ ಬೀಜದ ಹುಡಿಯನ್ನು 3ರಿಂದ 6ಗ್ರಾಂನಷ್ಟು ಸೇವಿಸಿದರೆ ಪುರುಷರ ನಿಮಿರು ದೌರ್ಬಲ್ಯ ಶಮನವಾಗುವುದು. ಮಧುಮೇಹದಿಂದ ಬಳಲುತ್ತಿರುವ ಪುರುಷರಲ್ಲಿ ನಿಮಿರು ದೌರ್ಬಲ್ಯ ಇರುವ ಸಾಧ್ಯತೆ ಇರುತ್ತದೆ. ಮಹಿಳೆಯರಲ್ಲೂ ಮಧುಮೇಹದಿಂದ ಲೈಂಗಿಕ ನಿರಾಸಕ್ತಿತಲೆದೋರಬಹುದು.
ಕಪಿಕಚ್ಚು ಇಂತಹ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.
ಸುಲಭ ವಿಧಾನ:
ಕಪಿಕಚ್ಚುವಿನ ಬೀಜವನ್ನು ಹಾಲಿನೊಂದಿಗೆ ಕುದಿಸಿ(ಇದಕ್ಕೆ ಸ್ವಲ್ಪ ಗೋದಿಯನ್ನು ಹಾಕಿ). ಆ ನಂತರ ತುಪ್ಪನೊಂದಿಗೆ ಸೇವಿಸಿದರೆ ಲೈಂಗಿಕ ಸಮಸ್ಯೆಗಳನ್ನು ನಿವಾರಿಸಬಹುದು.
ಇದನ್ನು ಮೂಲವ್ಯಾಧಿಗಳಲ್ಲಿಯೂ ಉಪಯೋಗಿಸಲಾಗುತ್ತದೆ. ಪಾರ್ಕಿನ್ ಸನ್ ಖಾಯಿಲೆಯಲ್ಲಿ ಇದು ರಾಮಬಾಣವಿದ್ದಂತೆ. ಇದರಲ್ಲಿರುವ L-dopa ಪಾರ್ಕಿನ್ ಸನ್ ಖಾಯಿಲೆಯನ್ನು ಶಮನಗೊಳಿಸುತ್ತದೆ.
 
ಡಾ.ಸತೀಶ ಶಂಕರ್ ಬಿ
[email protected]

LEAVE A REPLY

Please enter your comment!
Please enter your name here