ಮಧುಮೇಹದಿಂದ ಬರುವ ಕಿಡ್ನಿಯ ತೊಂದರೆಗಳು

0
639

ಅಂಕಣ: ಡಾ.ಸತೀಶ ಶಂಕರ್ ಬಿ
ಕಿಡ್ನಿಯು ಶರೀರದ ಅತ್ಯಂತ ಪ್ರಮುಖವಾದ ಅಂಗಗಳಲ್ಲಿ ಒಂದು. ಕಿಡ್ನಿಯು ರಕ್ತದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ. ಶರೀರಕ್ಕೆ ಬೇಕಾದ ಪ್ರೋಟಿನ್ ಗಳನ್ನು ಮತ್ತೆ ರಕ್ತಕ್ಕೆ ತಲುಪುವಂತೆ ಮಾಡುತ್ತದೆ. ಕಿಡ್ನಿಯು ಶರೀರದ ನೀರಿನಂಶವನ್ನು ಹತೋಟಿಯಲ್ಲಿ ಇಡುತ್ತದೆ. ಕಿಡ್ನಿಗೆ ದೊಡ್ಡ ರಕ್ತನಾಳವು ರಕ್ತವನ್ನು ಪೂರೈಸುತ್ತದೆ. ಇದು ಅನೇಕ ಸಣ್ಣರಕ್ತನಾಳಗಳಾಗಿ ವಿಭಜನೆ ಹೊಂದುತ್ತದೆ. ಅನೇಕ ಸಣ್ಣ ರಕ್ತನಾಳಗಳ ಸಮೂಹಕ್ಕೆ ಗ್ಲೊಮೆರುಲೈ ಎಂದು ಕರೆಯಲಾಗುತ್ತದೆ. ಇದು ರಕ್ತದಲ್ಲಿರುವ ಉಪ್ಪಿನ ಅಂಶ ಮತ್ತು ಕಲ್ಮಶಲಗಳನ್ನು ಹೊರಹಾಕುತ್ತದೆ. (ಮೂತ್ರದ ಮೂಲಕ) ಶರೀರಕ್ಕೆ ಬೇಕಾದ ಪ್ರೋಟೀನ್ ಗಳು ಮತ್ತೆ ರಕ್ತಕ್ಕೆ ಸೇರುತ್ತದೆ.
 
 
 
ಮಧುಮೇಹ ಮತ್ತು ಕಿಡ್ನಿಯ ತೊಂದರೆಗಳು:
ಮಧುಮೇಹಿಗಳಲ್ಲಿ ಗ್ಲೊಮೆರುಲೈ(ಸಣ್ಣ ರಕ್ತನಾಳಗಳ ಸಮೂಹ) ಹಾನಿಗೀಡಾಗುತ್ತದೆ. ಇದರಿಂದ ಮೂತ್ರದಲ್ಲಿ ಪ್ರೋಟೀನ್ ಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತದೆ. ಮತ್ತು ಶರೀರದ ಕಲ್ಮಶಗಳು ರಕ್ತದಲ್ಲಿಯೇ ಉಳಿದುಕೊಳ್ಳುತ್ತದೆ. ಇದರಿಂದ ಮಧುಮೇಹದ ಕಿಡ್ನಿಯ ತಿಂದರೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
 
 
 
ಲಕ್ಷಣಗಳು: ಆರಂಭದಲ್ಲಿ ಯಾವುದೇ ಲಕ್ಷಣಗಳು ಗೋಚರಿಸದೇ ಇರಬಹುದು.
* ತೂಕದಲ್ಲಿ ಹೆಚ್ಚಾಗುವುದು, ಅತಿಯಾದ ಸುಸ್ತು
* ಕಾಲಿನಲ್ಲಿ, ಪಾದದಲ್ಲಿ ಊತ ಕಾಣಿಸಿಕೊಳ್ಳುತ್ತದೆ.
* ಪದೇ ಪದೇ ಮೂತ್ರ ಬಂದಂತಾಗುವುದು
* ಆರಂಭದಲ್ಲಿ ಚಿಕಿತ್ಸೆ ತೆಗೆದುಕೊಳ್ಳದೇ ಇದ್ದಲ್ಲಿ ಕಿಡ್ನಿ ಫೆಲ್ಯೂರ್ ಆಗಬಹುದು.
* ವಾಂತಿ, ಮುಖದಲ್ಲಿ ಊತ ಕಾಣಿಸಿಕೊಳ್ಳಬಹುದು
 
 
ಪತ್ತೆಹಚ್ಚುವಿಕೆ:
* ಮೂತ್ರದ ಅಲ್ಬುಮಿನ್ ಪರೀಕ್ಷೆಯಲ್ಲಿ ಕಿಡ್ನಿಯ ತೊಂದರೆಯನ್ನು ಪತ್ತೆಹಚ್ಚಬಹುದು.
* ಕ್ರಿಯಾಟೆನಿನ್ ಪರೀಕ್ಷೆ
 
 
 
ಮಧುಮೇಹಿಗಳು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು:
* ಮಧುಮೇಹ ನಿಯಂತ್ರಣದಲ್ಲಿ ಇರಬೇಕು.
* ವರ್ಷಕ್ಕೊಮ್ಮೆ ವೈದ್ಯರಲ್ಲಿ ತಪಾಸಣೆ
* ವರ್ಷಕ್ಕೊಮ್ಮೆ ಮೂತ್ರದ ಆಲ್ಬುಮಿನ್ ಪರೀಕ್ಷೆ
* ಕ್ರಿಯಾಟಿನಿನ್ ಪರೀಕ್ಷೆ
* ರಕ್ತದೊತ್ತಡ ನಿಯಂತ್ರಣದಲ್ಲಿಡಿ
* ಉಪ್ಪನ್ನು ಹಿತಮಿತವಾಗಿ ಬಳಸಿ
* ಕೊಬ್ಬಿನ ಅಂಶವನ್ನು ಹೆಚ್ಚಾಗಿ ಸೇವಿಸಬೇಡಿ
* ಎಣ್ಣೆಯಲ್ಲಿ ಕರಿದ ತಿನಿಸುಗಳನ್ನು ಸೇವಿಸಬೇಡಿ
* ಅನಾವಶ್ಯಕ ಮಾತ್ರೆಗಳ ಸೇವನೆಯಿಂದ ದೂರವಿರಿ
 
ಡಾ.ಸತೀಶ ಶಂಕರ್ ಬಿ
[email protected]

LEAVE A REPLY

Please enter your comment!
Please enter your name here