ಮಧುಮೇಹದಿಂದ ಬರುವ ಕಣ್ಣಿನ ತೊಂದರೆಗಳು

0
232

ಅಂಕಣ: ಡಾ.ಸತೀಶ ಶಂಕರ್ ಬಿ.
ಮಧುಮೇಹದಿಂದ ಬರುವ ಕಣ್ಣಿನ ತೊಂದರೆಗಳ ವಿಧಗಳು:
1) ಡಯಾಬಿಟಿಕ್ ರೆಟಿನೋಪತಿ
2) ಡಯಾಬಿಟಿಕ್ ಕೆಟರಾಕ್ಟ್
 
 
1) ಡಯಾಬಿಟಿಕ್ ರೆಟಿನೋಪತಿ:
ಮಧುಮೇಹದಿಂದ ಬರುವ ಕಣ್ಣಿನ ತೊಂದರೆಗಳಲ್ಲಿ ಇದು ಪ್ರಮುಖವಾದುದು. ಮಧುಮೇಹ ಆರಂಭವಾದ 10ರಿಂದ 20 ವರ್ಷದ ನಂತರ ಈ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಮಧುಮೇಹ ಆರಂಭದ ಬಳಿಕ ಅದು ಹತೋಟಿಯಲ್ಲಿ ಇಲ್ಲದೇ ಹೋದಲ್ಲಿ ಡಯಾಬಿಟಿಕ್ ರೆಟಿನೋಪತಿ ಇನ್ನೂಮುಂಚಿತವಾಗಿ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಹತೋಟಿಯಲ್ಲಿ ಇದ್ದರೂ ಮಧುಮೇಹ ಆರಂಭವಾದ 10 ರಿಂದ 20 ವರ್ಷ ನಂತರ ಎಲ್ಲರಲ್ಲೂ ಇದು ಕಾಣಿಸಿಕೊಳ್ಳುತ್ತದೆ. ಕಣ್ಣಿನಲ್ಲಿ ಒಟ್ಟಿ ಮೂರು ವಿಧವಾದ ರಚನೆಯಿದೆ.:
1) ಪೈಬಸ್ ಕೋಟ್
2) Vafcular coat (ರಕ್ತನಾಳದ ರಚನೆ)
3) Nervous cout(ನರಮಂಡಲದ ರಚನೆ)
ರೆಟಿನಾ ಎಂಬುದು ನರಮಂಡಲದ ರಚನೆ ಮಧುಮೇಹದಿಂದ ನರಮಂಡಲಕ್ಕೆ ತೊಂದರೆಯಾದಾಗ ರೆಟಿನೋಪತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಮಧುಮೇಹಿಗಳಲ್ಲಿ ಮಧುಮೇಹದ ಜೊತೆ ಬಿಪಿ ಅಥವಾ ಸಿಗರೇಟ್ ಸೇದುವ ಅಭ್ಯಾಸ ಇದ್ದಲ್ಲಿ ರೆಟಿನೋಪತಿ ಇನ್ನೂ ಮುಂಚಿತವಾಗಿ ಕಾಣಿಸಿವುದು. ಮಧುಮೇಹಿಗಳಲ್ಲಿ ಅಂಧತ್ವ 20ರಿಂದ 25 ಶೇ. ಅಧಿಕವಾಗಿ ಇರುವುದು ಮಧುಮೇಹಿಗಳು ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
 
ಲಕ್ಷಣಗಳು:
* ದೃಷ್ಠಿ ಮಂಜಾಗುವುದು
* ಕೆಲವೊಂದು ಪ್ರದೇಶ ಕಾಣದೇ ಇರುವುದು(Dark spots)
*ಚುಕ್ಕಿಯಂತಹ ವಸ್ತು ಕಣ್ಣಿನೆದುರಿಗೆ ಹೋದಂತೆ ಭಾಸವಾಗಿವುದು.
 
 
ಮುಂಜಾಗ್ರತಾ ಕ್ರಮಗಳು(ರೆಟಿನೋಪತಿ)
1) ಪ್ರತಿ ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ
2) ಮಧುಮೇಹ ನಿಯಂತ್ರಣದಲ್ಲಿ ಇಡಬೇಕು
3) ಬಿಪಿ ನಿಯಂತ್ರಣದಲ್ಲಿ ಇಡಬೇಕು
4) ಧೂಮಪಾನ, ಮದ್ಯಪಾನದಿಂದ ದೂರವಿರಿ
5) ದಿನವೂ 30 ನಿಮಿಷ ವ್ಯಾಯಾಮ ಮಾಡಿ
6) ಮಧುಮೇಹದ ನಿಯಮಿತ ರಕ್ತ ಪರೀಕ್ಷೆ
7) ನಿಯಮಿತವಾಗಿ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ
 
2) ಡಯಾಬಿಟಿಕ್ ಕೆಟರ್ಯಾಕ್ಟ್
ಇದು ಲೆನ್ಸ್ ನ ತೊಂದರೆಯಿಂದ ಬರುತ್ತದೆ. ಮಧುಮೇಹಗಳಲ್ಲಿ ಇದು. ಬಹಳ ಬೇಗನೇ ಕಾಣಿಸಿಕೊಳ್ಳುತ್ತದೆ.
ಲೆನ್ಸ್ ನ ಪಾರದರ್ಶಕತ್ವ ಕಳೆದುಕೊಂಡಾಗ catarace-ಕಾಣಿಸಿಕೊಳ್ಳುತ್ತದೆ. ಮಧುಮೇಹಿಗಳಲ್ಲಿ ಇದು ಮುಂಚಿತವಾಗಿಯೇ ಬರುತ್ತದೆ.
ಇದರಿಂದ ದೃಷ್ಠಿ ಮಾಂದ್ಯ ಉಂಟಾಗುವುದು. ಮೇಲೆ ಹೇಳಿದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರಿಂದ ಇದನ್ನು ತಡೆಗಟ್ಟಬಹುದು.
 
ಡಾ.ಸತೀಶ ಶಂಕರ್ ಬಿ.
response@vaarte.com

LEAVE A REPLY

Please enter your comment!
Please enter your name here