ಮಧುಮೇಹಕ್ಕೆ ಸರಳ ಚಿಕಿತ್ಸೆ(ಹಳ್ಳಿಮದ್ದು)

0
406

ಅಂಕಣ: ಡಾ.ಸತೀಶ ಶಂಕರ್ ಬಿ
ಹಳ್ಳಿ ಮದ್ದು:
1) ಹಸಿನೆಲ್ಲಿಕಾಯಿ ಜಜ್ಜಿ ರಸ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.
2) ನೆಲ್ಲಿಕಾಯಿ ಮರದ ಬೇರು ಒಂದು ತೊಲೆ ಅಮೃತಬಳ್ಳಿ 2 ತೊಲೆ ಮತ್ತು ಒಣ ಅರಸಿನ ಕೊಂಬು 1 ತೊಲೆ ಈ ಮೂರನ್ನು ಜಜ್ಜಿ ಒಂದು ಕುತ್ತಿ ನೀರಲ್ಲಿ ಕಷಾಯವಿಟ್ಟು ಬತ್ತಿಸಿ, ಒಂದು ಕುಡ್ತೆಯಾದಾಗ ಇಳಿಸಿ ಸೋಸಿ 1/2ಕುಡ್ತೆಯನ್ನು ರಾತ್ರಿ ಊಟದ ನಂತರ ಮತ್ತು ಉಳಿದ 1/2 ಕುಡ್ತೆಯನ್ನು ಪ್ರಾತಃ ಕಾಲ ಬಿಸಿನೀರಿನೊಂದಿಗೆ ಸೇವಿಸಿ.
ಮಧುಮೇಹದ ಸಾಂಕ್ರಾಮಿಕ ಕೀಟಾಣುಗಳನ್ನು ನಾಶಗೊಳಿಸುವುದರಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿದೆ.
3)ಬೂದುಕುಂಬಳಕಾಯಿ ರಸ 4 ತೊಲೆ(1-1/2ಚೌನ್ಸ್), ಯುವಕ್ಷಾರ 500 mg, ತುಪ್ಪದಲ್ಲಿ ಹುರಿದ ಹಿಂಗು 250 mg ಚೆನ್ನಾಗಿ ಮಿಶ್ರಣ ಮಾಡಿ ಕೆಲವು ದಿವಸ ಕುಡಿಯುವುದರಿಂದ ಸಕ್ಕರೆ ರೋಗ ನಿವಾರಣೆಯಾಗುತ್ತದೆ.
4)ಸೌತೆಕಾಯಿಯ ಒಣಗಿಸಿದ ಬೀಜ 2ತೊಲೆತಷ್ಟು ಸೇವಿಸುವುದರಿಂದ ಮೂತ್ರ ದೋಷ ನಿವಾರಣೆಯಾಗುತ್ತದೆ.
ಕಷಾಯ:
5)ಅಮೃತಬಳ್ಳಿ, ಕಹಿಬೇವಿನ ಕೆತ್ತೆ, ಪಡುವಲಬಳ್ಳಿ, ಪಡುವಲಕಾಯಿ ಸಿಪ್ಪೆ, ಶಾಂತಿಕಾಯಿ, ಅಣಲೆಕಾಯಿ, ನೆಲ್ಲಿಕಾಯಿ, ದೇವದಾರು ಪ್ರತಿಯೊಂದನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಜಜ್ಜಿ 8 ಕುಡ್ತೆ ನೀರಲ್ಲಿ ಕಷಾಯವಿಟ್ಟು ಬತ್ತಿಸಿ 1 ಕುಡ್ತೆಯಾದಾಗ ಸೋಸಿ ಬೆಳಗ್ಗೆ 1/2 ಕುಡ್ತೆ, ರಾತ್ರಿ 1/2 ಕುಡ್ತೆ ಸೇವಿಸಬೇಕು. ಹೀಗೆ 48 ದಿವಸ ಸೇವಿಸಿದರೆ ಸಿಹಿಮುತ್ರ ಶಮನವಾಗುತ್ತದೆ.
 
 
 
ಮಧುಮೇಹದ ಗಾಯಕ್ಕೆ:
* ನಾಚಿಕೆಮುಳ್ಳಿನ ಗಿಡ ಸಮೂಲ ತಂದು ಕಷಾಯ ತಯಾರಿಸಿ ಅದರಲ್ಲಿ ಸ್ನಾನ ಮಾಡಬೇಕು.
* ಬಿಲ್ವಪತ್ರೆ ಸೊಪ್ಪು ತಂದು ಜಜ್ಜಿ ರಸ ತೆಗೆದು ಸರ್ವಾಂಗ ಲೇಪ ಮಾಡಬೇಕು.
* 1/2 ಜೌನ್ಸಿನಷ್ಟು ಬಿಲ್ವಪತ್ರೆಯ ಸೊಪ್ಪಿನ ರಸವನ್ನು ದನದ ಮಜ್ಜಿಗೆಯೊಂದಿಗೆ ಮಿಶ್ರ ಮಾಡಿ ಕುಡಿಯಬೇಕು.
* ನೆಲ್ಲಿಹಿಂಡಿ, ಬಾಳೆಕುಂಡಿಗೆ ರಸ ಸೇವಿಸಬಹುದು.
* ಮಾವಿನ ಎಲೆಗಳನ್ನು ಆಯ್ದು ತಂದು ನೆರಳಲ್ಲಿ ಒಣಗಿಸಿ ಇಟ್ಟುಕೊಳ್ಳಬೇಕು. ಅದರಲ್ಲಿ 3 ತೊಲೆ ಮಾವಿನ ಎಲೆಯನ್ನು * 4 ಕುಡ್ತೆ ನೀರಲ್ಲಿ ಹಾಕಿ ಬತ್ತಿಸಿ 1/2 ಕುಡ್ತೆಯಾದಾಗ ಇಳಿಸಿ, ಸೋಸಿ 1/2 ಭಾಗ ರಾತ್ರಿ ಮತ್ತು 1/2 ಭಾಗ ಬೆಳಗ್ಗೆ ಸೇವನೆ ಮಾಡಬೇಕು.
 
ಅಂಕಣ: ಡಾ.ಸತೀಶ ಶಂಕರ್ ಬಿ
[email protected]

LEAVE A REPLY

Please enter your comment!
Please enter your name here