ಮಧುಗೆ 'ಕೈ' ಗಾಳ

0
170

ನಮ್ಮ ಪ್ರತಿನಿಧಿ ವರದಿ
ಮಧು ಬಂಗಾರಪ್ಪರನ್ನು ಸೆಳೆಯಲು ಕಾಂಗ್ರೆಸ್ ಪಕ್ಷದಿಂದ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್ ಸಚಿವ ಕಾಗೊಡು ತಿಮ್ಮಪ್ಪ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಯತ್ನಿಸಲಾಗುತ್ತಿದೆ.
ಕುಮಾರ್ ಬಂಗಾರಪ್ಪ ಬಿಜೆಪಿಗೆ ಸೇರ್ಪಡೆಯಾಗುತ್ತಿರೋ ಹಿನ್ನೆಲೆಯಲ್ಲಿ ಸೊರಬದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ.
 
 
 
ಶಿವಮೊಗ್ಗ ಜಿಲ್ಲೆಯಲ್ಲಿ ಆಪರೇಷನ್ ಹಸ್ತ ನಡೆಸಲು ರಣತಂತ್ರ ರೂಪಿಸಲಾಗಿದೆ. ಮಧು ಕರೆತರಲು ಇಬ್ಬರು ಪ್ರಭಾವಿ ಸಚಿವರುಗಳು ರಣತಂತ್ರ ಮಾಡಿದ್ದಾರೆ. ಮಧು ಬಂಗಾರಪ್ಪ ಸೆಳೆಯಲು ಡಿ.ಕೆ.ಶಿವಕುಮಾರ್ ಕೂಡ ಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಮಧು ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಲಾಗಿದೆ.
 
ಸದ್ಯ ಮಧುಬಂಗಾರಪ್ಪ ವಿದೇಶ ಪ್ರವಾಸದಲ್ಲಿದ್ದು, ನಾಳೆ ವಿದೇಶದಿಂದ ಬರಲಿದ್ದಾರೆ.ನಾಳೆ ಸೊರಬ ವಿಧಾನಸಭಾ ಕ್ಷೇತ್ರ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬವಿದೆ.

LEAVE A REPLY

Please enter your comment!
Please enter your name here