ಮತ್ತೊಮ್ಮೆ ರಾಜೀನಾಮೆ

0
386

ಉಡುಪಿ ಪ್ರತಿನಿಧಿ ವರದಿ
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕಬ್ಬಾಳ್ ರಾಜ್ ರಾಜೀನಾಮೆ ನೀಡಿದ್ದಾರೆ. ಉಡುಪಿ ತಾಲೂಕಿನ ಕೋಟ ಪೊಲೀಸ್ ಠಾಣೆ ಪಿಎಸ್ ಐ ರಾಜೀನಾಮೆ ನೀಡಿದ್ದಾರೆ.
 
 
ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಕೋಟದ ಠಾಣೆಯ ತಮ್ಮ ಛೇಂಬರ್ ನಲ್ಲಿ ರಾಜೀನಾಮೆ ಪತ್ರ ಬರೆದಿಟ್ಟು ಪಿಎಸ್ ಐ ಕಬ್ಬಾಳ್ ರಾಜ್ ತೆರಳಿದ್ದಾರೆ. ಪಿಎಸ್ ಐ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.
 
 
ಕಬ್ಬಾಳ್ ರಾಜ್ ಅವರು ಪೊಲೀಸರ ಪ್ರತಿಭಟನೆ ವೇಳೆ ವೈಯಕ್ತಿಕ ಕಾರಣ ನೀಡಿ ರಾಜೀನಾಮೆಗೆ ಮುಂದಾಗಿದ್ದರು. ಆಗ ಅಂದಿನ ಉಡುಪಿ ಎಸ್ ಪಿ ಅಣ್ಣಾಮಲೈ ಮನವೊಲಿಸಿದ್ದರು. ಎಸ್ ಮನವೊಲಿಕೆ ಹಿನ್ನೆಲೆಯಲ್ಲಿ ನಿರ್ಧಾರ ಬದಲಿಸಿದ್ದರು. ನಂತರ ಪಿಎಸ್ ಐ ಆಗಿ ಸೇವೆ ಮುಂದುವರಿಸಿದ್ದರು.

LEAVE A REPLY

Please enter your comment!
Please enter your name here