ರಾಜ್ಯ

ಮತ್ತೆ ಬಂದಿತು ಆಳ್ವಾಸ್ ವಿರಾಸತ್!

ಮೂಡಬಿದ್ರೆ,೨೨ ಕಲೆ ಹಾಗೂ ಸಂಸ್ಕ್ರತಿಗಳ ಪ್ರತೀಕವಾದ ಆಳ್ವಾಸ್ ವಿರಾಸತ್ ಆಳ್ವಾಸಿನ ಕುವೆಂಪು ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಮುಖ್ಯಸ್ಥ ವಿವೇಕ ಆಳ್ವ ಹಾಗೂ ಚಿತ್ರಕಾರ ಗಣೇಶ ಸೋಮಯಾಜಿ, ಕೋಟಿ ಪ್ರಸಾದ್ ಆಳ್ವ ಹಾಗೂ ಪುರುಷೋತ್ತಮ ಅದ್ವಿತ್ ಉಒಸ್ಥಿತರಿದ್ದರು. ಖ್ಯಾತ ಶಿಲ್ಪಿಗಳಾದ ಸುರಾಲು ವೆಂಕಟರಮಣ ಭಟ್ ದೀಪ ಬೆಳಗಿಸುವ ಮೂಲಕ ಆಳ್ವಾಸ್ ಶಿಲ್ಪ ವಿರಾಸತ್ ಉದ್ಘಾಟಿಸಿದರು. ಇದೇ ವೇಳೆಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸುರಾಲು ವೆಂಕಟರಮಣ ಭಟ್ “ಶಿಲ್ಪಿಗಳು ಏನು ಮಾಡಬಲ್ಲರೆಂಬುದನ್ನ ಸಮಾಜಕ್ಕೆ ತೋರಿಸಬೇಕಾಗಿದೆ, ಶಿಲ್ಪಕಲೆಯಲ್ಲಿ ಪರಿಶ್ರಮ ಬೇಕೆ ಬೇಕು, ಮಾಡಬಲ್ಲೆ ಎಂಬ ಛಲವಿದ್ದಾಗ ಯಾವುದೂ ಅಸಾಧ್ಯವೆನ್ನಿಸುವುದಿಲ್ಲ, ಮಾಡಬಲ್ಲೆ ಎಂಬ ಭರವಸೆ ನಮ್ಮಲ್ಲಿದ್ದರೆ ಏನೂ ಬೇಕಾದರೂ ಸಾಧಿಸಬಹುದು, ವಯಸ್ಸು ದೇಹಕ್ಕೆ ಹೊರತು ಮನಸ್ಸಿಗಲ್ಲ, ಮಾಡಬಲ್ಲೆ ಎಂಬ ಛಲಕ್ಕೆ ವಯಸ್ಸಿಲ್ಲ” ಎಂದರು, ಆಳ್ವಾಸ್ ಶಿಲ್ಪ ವಿರಾಸತ್ ಬಗೆಗೆ ಮಾತನಾಡಿದ ವಿವೇಕ್ ಆಳ್ವ “ಆಳ್ವಾಸ್ ಇಷ್ಟರ ಮಟ್ಟಿಗೆ ಬೆಳೆಯಲು ಕಲಾವಿದರೇ ಕಾರಣ, ನಾವು ಕಲಾವಿದರು ಬಿಡಿಸಿದ ಚಿತ್ರಗಳನ್ನ ಗೋಡೆಗೆ ಹಾಕಿದ್ದನ್ನು ಗಮನಿಸಿ ಅದೆಷ್ಟೋ ಮಂದಿ ತಾವು ಚಿತ್ರ ಬಿಡಿಸಬೇಕೆಂದು ಮುಂದೆ ಬರುತ್ತಾರೆ, ಹೀಗೆ ಕಲೆಯನ್ನ ಪ್ರೋತ್ಸಾಹ ಮಾಡುವುದು ಒಂದು ಸಂಸ್ಥೆಯಾಗಿ ನಮ್ಮ ಕರ್ತವ್ಯ. ಪ್ರತಿಯೊಂದು ರಾಜ್ಯದಲ್ಲೂ ಯನ್ನದೇ ಆದ ಕಲೆಗಳಿವೆ ಅವುಗಳನ್ನ ಒಂದೆ ವೇದಿಕೆಯಲ್ಲಿ ಪ್ರದರ್ಶಿಸುವುದು ಶಿಲ್ಪ ವಿರಾಸತ್ ಉದ್ದೇಶ” ಎಂದರು.

ಯಾರು ಸುರಾಲು ವೆಂಕಟರಮಣ ಭಟ್?
ಖ್ಯಾತ ಶಿಲ್ಪಿಗಳಾದ ಸುರಾಲು ವೆಂಕಟರಮಣ ಭಟ್ ಕಜುರಾಹೋ ಸೇರಿದಂತೆ ಭಾರತದ ಅನೇಕ ಶಿಲ್ಪಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಕದಂಬ ಇನ್ಸ್ಟಿಟ್ಯೂಟ್ ಮುಖ್ಯಸ್ಥರಾಗಿದ್ದಾರೆ, ಹೊಯ್ಸಳ ಶೈಲಿಯ ಶಿಲ್ಪವಿನ್ಯಾಸಕ್ಕೆ ಹೊಸ ರೂಪು ಕೊಟ್ಟ ವೆಂಕಟರಮಣ ಭಟ್ ರವರಿಗೆ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ಲಾಸ್ ವೇಗಾಸ್ ಹಿಂದೂ ಟೆಂಪಲ್ ಪ್ರಶಸ್ತಿ, ಮೇಲ್ವಾಕಿ ಪ್ರಶಸ್ತಿ ಹಾಗೂ ಲಾಸ್ ವೇಗಾಸ್ ಹಿಂದೂ ಟೆಂಪಲ್ ಅವಾರ್ಡ್ ಪ್ರಶಸ್ತಿಗಳು ದೊರಕಿವೆ. ಹೊರರಾಜ್ಯಗಳಲ್ಲದೆ ವಿದೇಶಗಳಲ್ಲೂ ಹೊಯ್ಸಳ ಶೈಲಿ ದೇಗುಲಗಳನ್ನ ನಿರ್ಮಿಸಿದ ಕೀರ್ತಿ ಇವರದ್ದು.

ಈ ಭಾರಿ ಶಿಲ್ಪ ವಿರಾಸತ್ ವಿಷೇಶವೇನು?
ಛತ್ತೀಸ್ಗಢ, ಕೇರಳ ಹಾಗೂ ರಾಜ್ಯದ ಹಲವು ಜಿಲ್ಲೆಗಳಿಂದ ತಂಡಗಳು ಬಂದಿದ್ದು, ಕ್ಲೇ ಆರ್ಟ್, ಮೆಟಲ್ ಆರ್ಟ್ ಹಾಗೂ ಕಲ್ಲು ಕೆತ್ತನೆಯ ಶಿಲ್ಪಗಳನ್ನ ಈ ಸಲ ಕಾಣಬಹುದಾಗಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here