ಮತ್ತೆ ಕಾಲ್ಕೆರೆದ ಪಾಕ್

0
288

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪಾಕಿಸ್ತಾನಿ ಸೈನಿಕರು ಉದ್ಧಟತನ ಪ್ರದರ್ಶನ ಮಾಡುತ್ತಿದ್ದಾರೆ. ಪಾಕ್ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ.ಭಾರತೀಯ ಪೋಸ್ಟ್ ಗಳತ್ತ ಗುಂಡಿನ ದಾಳಿ ನಡೆಸಿದ್ದಾರೆ.
 
 
 
ಹಂದ್ವಾರಾ ಸೆಕ್ಟರ್ ನಲ್ಲಿ ಪಾಕ್ ಸೇನೆ ಫೈರಿಂಗ್ ನಡೆಸಿದೆ. ಭಾರತೀಯ ಸೇನಾ ಶಿಬಿರವನ್ನು ಗುರಿಯಾಗಿ ಪಾಕ್ ದಾಳಿ ನಡೆಸಿದೆ. ಇದರಿಂದ ಭಾರತದ ವಿರುದ್ಧ ಮತ್ತೆ ಪಾಕ್ ಸೇನಾಪಡೆ ಕಾಲ್ಕೆರೆದಿದೆ. ನೌಗಾಮ್ ಸೆಕ್ಟರ್ ನ ಕೆಲ ಕಡೆಯೂ ಪಾಕ್ ನಿಂದ ಫೈರಿಂಗ್ ನಡೆದಿದೆ.
ಪೂಂಚ್ ಸೆಕ್ಟರ್ ನಲ್ಲೂ ದಾಳಿ:
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ ನ ಸಬ್ಜಿಯಾನ್ ಪ್ರದೇಶದಲ್ಲಿ ಪಾಕಿಸ್ತಾನ ಪಡೆಗಳು ಕಳೆದ ರಾತ್ರಿ ಭಾರತೀಯ ಯೋಧರತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಗುಂಡಿನ ಚಕಮಕಿ ನಡೆಸಿದ್ದಾರೆ. ಪಾಕಿಸ್ತಾನಿ ಪಡೆಗಳ ದಾಳಿಗೆ ಭಾರತೀಯ ಯೋಧರೂ ಕೂಡ ಸಮರ್ಥ ಪ್ರತಿದಾಳಿ ನಡೆಸಿದ್ದು, ದಾಳಿಯಲ್ಲಿ ಯಾವುದೇ ಸಾವು-ನೋವಿನ ಕುರಿತು ವರದಿಯಾಗಿಲ್ಲ.
 
 
 
ಕಳೆದ ಸೆಪ್ಟೆಂಬರ್ 20ರಂದು ಉರಿಯಲ್ಲಿ ನಡೆದ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನಿ ಪಡೆಗಳು ಪದೇ ಪದೇ ಭಾರತೀಯ ಯೋಧರತ್ತ ದಾಳಿ ನಡೆಸುತ್ತಿವೆ.

LEAVE A REPLY

Please enter your comment!
Please enter your name here