ಮತ್ತೆ ಕಾಣಿಸಿಕೊಂಡ ಒಂಟಿ ಸಲಗ

0
482

ಬೆಂಗಳೂರು ಪ್ರತಿನಿಧಿ ವರದಿ
ಮಾಯಸಂದ್ರ ಗ್ರಾಮದ ಬಳಿ ಒಂಟಿಸಲಗವೊಂದು ಕಾಣಿಸಿಕೊಂಡಿದೆ. ಬೆಂಗಳೂರು ಹೊರವಲಯದ ತಾವರೆಕೆರೆ ಬಳಿಯ ಗ್ರಾಮದಲ್ಲಿ ಸಲಗ ಕಾಣಿಸಿಕೊಂಡಿದೆ.
 
 
ಒಂಟಿಸಲಗ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸಾವನದುರ್ಗ ಅರಣ್ಯ ಪ್ರದೇಶದಿಂದ ನಾಡಿಗೆ ಬಂದಿದೆ. 2 ದಿನಗಳ ಹಿಂದೆ ಹಳ್ಳಕ್ಕೆ ಬಿದ್ದು ಕಾಡಾನೆಯ ಕಾಲುಮುರಿತವಾಗಿತ್ತು.
 
 
ನಿನ್ನೆ ಸಲಗ ಉದ್ದಂಡನಹಳ್ಳಿಯ ತೋಪಿನಲ್ಲಿ ಕಾಲಕಳೆದಿತ್ತು. ಅರಣ್ಯ ಸಿಬ್ಬಂದಿಗಳು ಅರಿವಳಿಕೆ ನೀಡಿ ಚಿಕಿತ್ಸೆ ನೀಡಿದ್ದಾರೆ. ನಂತರ 80ಕ್ಕೂ ಹೆಚ್ಚು ಸಿಬ್ಬಂದಿ ಕಾಡಿಗಟ್ಟಲು ಯತ್ನಿಸಿದ್ದರು. ಆದರೆ ಈಗ ಮತ್ತೆ ಮಾಯಸಂದ್ರದ ಬಳಿ ಆನೆ ಕಾಣಿಸಿಕೊಂಡಿದೆ. ಪಟಾಕಿ ಸಿಡಿಸಿ ಆನೆಯನ್ನು ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಯತ್ನಿಸಿದ್ದಾರೆ. ಆನೆಯ ಕಾಲುಮುರಿತ ಹಿನ್ನೆಲೆಯಲ್ಲಿ ಒಂಟಿಸಲಗ ಕುಂಟುತ್ತಿದೆ.

LEAVE A REPLY

Please enter your comment!
Please enter your name here