ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

0
244

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಗಡಿಯಲ್ಲಿ ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆಯಾಗಿದೆ. ಜಮ್ಮು-ಕಾಶ್ಮೀರದ ಹೀರಾನಗರ ಸೆಕ್ಟರ್ ನಲ್ಲಿ ಪಾಕ್ ಗುಂಡಿನ ದಾಳಿ ನಡೆದಿದೆ.
ಕಣಿವೆ ರಾಜ್ಯದ ಕತ್ವಾ ಜಿಲ್ಲೆ ಹೀರಾನಗರ ಸೆಕ್ಟರ್ ನ ಬೊಬಿಯಾ ಪೊಸ್ಟ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಆದರೆ ಬಿಎಸ್ ಎಫ್ ಯೋಧರು ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರ ನೀಡಿದ್ದಾರೆ.
 
 
ಬಿಎಸ್ ಎಫ್ ಪ್ರತಿದಾಳಿಯಲ್ಲಿ ಪಾಕ್ ರೇಂಜರ್ ನ ಯೋಧ ಸಾವನ್ನಪ್ಪಿದ್ದಾನೆ. ಪಾಕ್ ಫೈರಿಂಗ್ ನಲ್ಲಿ ಓರ್ವ ಬಿಎಸ್ ಎಫ್ ಯೋದನಿಗೆ ಗಾಯಗಳಾಗಿವೆ.ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಗುಂಡಿನ ಚಕಮಕಿ ಮುಂದುವರಿದಿದೆ.
ಕಳೆದ 24 ಗಂಟೆಗಳಲ್ಲಿ 2ನೇ ಬಾರಿಗೆ ಕದನ ವಿರಾಮ ಉಲ್ಲಂಘನೆಯಾಗಿದೆ.

LEAVE A REPLY

Please enter your comment!
Please enter your name here