ಮತ್ತಿಬ್ಬರು ಆರೋಪಿಗಳ ಬಂಧನ

0
233

ಉಡುಪಿ ಪ್ರತಿನಿಧಿ ವರದಿ
ಉಡುಪಿಯ ಹೊಟೇಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.  3ನೇ ಆರೋಪಿ ನಿರಂಜನ್ ಭಟ್ ನ ತಂದೆ ಶ್ರೀನಿವಾಸ ಭಟ್ ಮತ್ತು ನಿರಂಜನ್ ಭಟ್ ನ ಕಾರು ಚಾಲಕ ರಾಘವೇಂದ್ರನ ಬಂಧನವಾಗಿದೆ.
 
 
ಸಾಕ್ಷ್ಯನಾಶ ಆರೋಪದಡಿ ಮಣಿಪಾಲ ಠಾಣೆ ಪೊಲೀಸರು ಶ್ರೀನಿವಾಸ, ರಾಘವೇಂದ್ರನನ್ನು ಸೆರೆಹಿಡಿಯಲಾಗಿದೆ. ಭಾಸ್ಕರ ಶೆಟ್ಟಿ ಹತ್ಯೆ ಸಂಬಂಧ ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
 
 
ಈಗಾಗಲೇ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ತಿಗಾಗಿ ತಾಯಿ-ಮಗ ಸೇರಿ ಭಾಸ್ಕರ್ ಶೆಟ್ಟಿಯನ್ನು ಇಂದ್ರಾಣಿ ಗ್ರಾಮದ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಬಳಿಕ ಉಡುಪಿ ತಾಲೂಕಿನ ನಂದಳಿಕೆ ಬಳಿ ಹೋಮಕುಂಡದಲ್ಲಿ ಆರೋಪಿಗಳು ಶವ ಸುಟ್ಟುಹಾಕಿದ್ದರು. ಭಾಸ್ಕರ್ ಶೆಟ್ಟಿ ಹತ್ಯೆಗೆ ನಿರಂಜನ್ ಭಟ್ ಸಹಾಯ ಮಾಡಿದ್ದ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

LEAVE A REPLY

Please enter your comment!
Please enter your name here