ಮಣಿಪುರದಲ್ಲಿ ಬಿಜೆಪಿ ಅಧಿಕಾರಿ

0
282

ರಾಷ್ಟ್ರೀಯ ಪ್ರತಿನಿಧಿ ವರದಿ
ಪಂಚ ರಾಜ್ಯಗಳ ಚುನಾವಣೆಗೆಗಳಲ್ಲಿ ಅತಂತ್ರ ವಿಧಾನಸಭೆಯನ್ನು ಎದುರಿಸಿದ್ದ ಮಣಿಪುರದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ಅಗತ್ಯವಿರುವಷ್ಟು ಶಾಸಕರ ಬೆಂಬಲ ಸಿಕ್ಕಿದೆ. 32 ಶಾಸಕರ ಬೆಂಬಲವಿರುವ ಪತ್ರವನ್ನು ರಾಜ್ಯಪಾಲರಿಗೆ ಈಗಾಗಲೇ ನೀಡಲಾಗಿದ್ದು, ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಖಚಿತವಾಗಿದೆ.
 
 
60 ವಿಧಾನಸಭಾ ಕ್ಷೇತ್ರಗಳಿರುವ ಮಣಿಪುರದಲ್ಲಿ ಬಿಜೆಪಿ 21 ಸ್ಥಾನಗಳನ್ನು ಗೆದ್ದಿದ್ದು ಅಧಿಕಾರ ಹಿಡಿಯಲು ಕನಿಷ್ಠ 10 ಶಾಸಕರ ಬೆಂಬಲ ಅಗತ್ಯವಿತ್ತು. ಈಗ ನ್ಯಾಷನಲ್ ಪೀಪಲ್ಸ್ ಪಕ್ಷ (ಎನ್ ಪಿಪಿ)ಯ 4 ಶಾಸಕರು ನಾಗಾ ಪೀಪಲ್ಸ್ ಫ್ರಂಟ್ ನ 4 ಶಾಸಕರು, ಎಲ್ ಜಿಪಿಯ ಓರ್ವ ಶಾಸಕ, ಹಾಗೂ ಮೂವರು ಇತರ ಶಾಸಕರು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಒಟ್ಟು 32 ಶಾಸಕರ ಬೆಂಬಲ ಸಿಕ್ಕಿದ್ದು, ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 28 ಸ್ಥಾನವನ್ನು ಪಡೆದಿತ್ತು.

LEAVE A REPLY

Please enter your comment!
Please enter your name here