ಮಡಹಾಗಲ ಸಾಂಬಾರು

0
270

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿ: 

ಮಡಹಾಗಲಕಾಯಿ 8-10, ಒಂದು ಆಲೂಗಡ್ಡೆ, ತೊಗರಿಬೇಳೆ 1ಕಪ್, ಹುಣಸೆ ಹಣ್ಣು ಸ್ವಲ್ಪ, ಅರ್ಧ ತೆಂಗಿನಕಾಯಿ, ಒಣಮೆಣಸು 5-6 ಕೊತ್ತಂಬರಿ 1 ಚಮಚ, ಉದ್ದಿನ ಬೇಳೆ 1 ಚಮಚ, ಸಾಸಿವೆ, ಎಣ್ಣೆ, ಕರಿಬೇವು ಸ್ವಲ್ಪ. ಉಪ್ಪು ರುಚಿಗೆ ತಕ್ಕಷ್ಟು.


ತಯಾರಿಸುವ ರೀತಿ:

ತೊಗರಿ ಬೇಳೆ ತೊಳೆದು ಬೇಯಿಸಿಟ್ಟುಕೊಂಡು ಮಡಹಾಗಲಕಾಯಿ ಹಾಗೂ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಹೆಚ್ಚಿ ಉಪ್ಪು ಹಾಕಿ ಬೇಯಿಸಿ. ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಒಂದು ಚಮಚ ಎಣ್ಣೆ ಹಾಕಿ ಮೆಣಸಿನಕಾಯಿ, ಕೊತ್ತಂಬರಿ, ಉದ್ದಿನಬೇಳೆ, ಮೆಂತೆ, ಜೀರಿಗೆ ಹಾಕಿ ಹುರಿದು ಕೆಂಪಗೆ ಆಗುವಾಗ ಇಳಿಸಿ. ತೆಂಗಿನ ತುರಿ ಮತ್ತು ಹುಣಸೆ ಹಣ್ಣಿನೊಂದಿಗೆ ರುಬ್ಬಿ. ಬೇಯಿಸಿಟ್ಟ ಬೇಳೆ ಹಾಗೂ ತರಕಾರಿಗೆ ಬೆರೆಸಿ. ಬಳಿಕ ಕುದಿಸಿ. ಸಾಸಿವೆ ಒಗ್ಗರಣೆಗೆ ಕರಿಬೇವು ಹಾಕಿ ಒಗ್ಗರಣೆ ಕೊಡಿ.

LEAVE A REPLY

Please enter your comment!
Please enter your name here