ಉದ್ಯೋಗದೇಶಪ್ರಮುಖ ಸುದ್ದಿವಾರ್ತೆ

ಮಝಗಾಂವ್ ಹಡಗು ನಿರ್ಮಾಣ ಘಟಕದಲ್ಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ

ಉದ್ಯೋಗ ವಾರ್ತೆ
ಮುಂಬೈನ ಹಡಗು ನಿರ್ಮಾಣ ಕೇಂದ್ರ ಮಝಗಾಂವ್ ಡಾಕ್ ಷಿಫ್-ಬಿಲ್ಡರ್ಸ್ ಲಿಮಿಟೆಡ್ ನಲ್ಲಿ ಕೌಶಲ ಮತ್ತು ಅರೆ ಕೌಶಲ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಅರ್ಹ ಅರ್ಭರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
 
 
ಹುದ್ದೆಗಳ ವಿವರ:
ಸ್ಕಿಲ್ಡ್ ಗ್ರೇಡ್-1
ಜೂನಿಯರ್ ಡ್ರಾಪ್ಟ್ಸ್ ಮನ್-37
ಜೂನಿಯರ್ ಪ್ಲಾನರ್
ಎಸ್ಟಿಮೇಟರ್-40
ಜೂನಿಯರ್ ಕ್ಯುಸಿ ಇನ್ಸ್ ಪೆಕ್ಟರ್-30
ಸ್ಟೋರ್ ಕೀಪರ್-25
ಫಾರ್ಮಸಿಸ್ಟ್-1
ಫಿಟ್ಟರ್-69
ಸ್ಟ್ರಕ್ಚರಲ್ ಫ್ಯಾಬ್ರಿಕೇಟರ್-335
ಪೈಪ್ ಫಿಟ್ಟರ್-87
ಬ್ರಾಸ್ ಫಿನಿಷರ್-1
ಎಲೆಕ್ಟ್ರಾನಿಕ್ ಮೆಕಾನಿಕ್-42
ಎಲೆಕ್ಟ್ರೀಷಿಯನ್-34
ಎಲೆಕ್ಟ್ರಿಕ್ ಕ್ರೇನ್ ಅಪರೇಟರ್-6
ಡೀಸೆಲ್ ಕ್ರೇನ್ ಆಪರೇಟರ್-2
ಎಸಿ ಮೆಕಾನಿಕ್-3
ಮಷಿನಿಸ್ಟ್-7
ಕಂಪ್ರೆಸರ್ ಅಟೆಂಡರ್-7
ಪೈಂಟರ್-18
ಕಾರ್ಪೆಂಟರ್-14
ಕಾಂಪೋಸಿಟ್ ವೆಲ್ಡರ್-90
ರಿಗ್ಗರ್-94
ಯುಟಿಲಿಟಿ ಹ್ಯಾಂಡ್(ಸ್ಕಿಲ್ಡ್)-2
ಸೆಮಿ ಸ್ಕಿಲ್ಡ್ ಗ್ರೇಡ್-3
ಸೆಕ್ಯೂರಿಟಿ ಸಿಪಾಯಿ(ಮಾಜಿ ಸೈನಿಕ)-5
ಲಸ್ಕರ್-10
ಸೆಮಿ ಸ್ಕಿಲ್ಡ್ ಗ್ರೇಡ್-1
ಫೈರ್ ಫೈಟರ್-23
ಯುಟಿಲಿಟಿ ಹ್ಯಾಂಡ್(ಸೆಮಿ ಸ್ಕಿಲ್ಡ್)-34
ಛಿಪ್ಪರ್ ಗ್ರೈಂಡರ್-24
 
 
ವೇತನ ವಿವರ:
ಸ್ಕಿಲ್ಡ್ ಗ್ರೇಡ್ ಹುದ್ದೆಗಳಿಗೆ ಮಾಸಿಕ ರೂ.7500, 2ನೇ ವರ್ಷ 7575ರೂ. ಇದೆ.
ಸೆಮಿ ಸ್ಕಿಲ್ಡ್ ಗ್ರೇಡ್ ಹುದ್ದೆಗಳಿಗೆ ಮಾಸಿಕ ರೂ. 7250, 2ನೇ ವರ್ಷ 7323ರೂ. ಇದೆ.
ಸೆಮಿ ಸ್ಕಿಲ್ಡ್ ಗ್ರೇಡ್ ಹುದ್ದೆಗಳಿಗೆ ಮಾಸಿಕ ರೂ.6000, 2ನೆ ವರ್ಷ 6060ರೂ. ಇದೆ.
 
 
 
ವಯಸ್ಸಿನ ಮಿತಿ:
ಸಾಮಾನ್ಯವಾಗಿ ಕನಿಷ್ಠ 18ರಿಂದ ಗರಿಷ್ಠ 33 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3ವರ್ಷ, ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹೆಚ್ಚುವರಿ 10 ವರ್ಷ ವಯೋಸಡಲಿಕೆ ಇದೆ.
 
 
ಅರ್ಹತೆ:
ಮೆಟ್ರಿಕ್ಯುಲೇಷನ್ ವಿದ್ಯಾರ್ಹತೆ ಜತೆಗೆ ಹುದ್ದೆಗಳಿಗೆ ಅನುಗುಣವಾಗಿ ಐಟಿಐ(ನ್ಯಾಷನಲ್ ಅಪ್ರೆಂಟಿಸ್ ಪ್ರಮಾಣ ಪತ್ರ)/ಡಿಪ್ಲೋಮಾ/ಪದವಿ ಪಡೆದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 
 
 
ಅರ್ಜಿ ಸಲ್ಲಿಸುವ ವಿಧಾನ:
ವೆಬ್ ಸೈಟ್ ನಲ್ಲಿ ಅರ್ಜಿ ನಮೂನೆ ನೀಡಲಾಗಿದ್ದು, ಅದರ ಪ್ರಿಂಟ್ ಪಡೆದು ಇಂಗ್ಲೀಷ್/ಹಿಂದಿ/ಮರಾಠಿಯಲ್ಲಿ ಭರ್ತಿ ಮಾಡಿದ ಅರ್ಜಿಯ ಜತೆಗೆ ಸ್ವಯಂ ದೃಢೀಕೃತ ದಾಖಲಾತಿ ಪ್ರತಿಗಳನ್ನು ಲಗತ್ತಿಸಿ ಸಂಬಂಧಿಸಿದ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಮತ್ತು ದಾಖಲಾತಿಗಳ ಪ್ರತಿ ಇರುವ ಮುಚ್ಚಿದ ಲಕೋಟೆ ಮೇಲೆ ಅಪ್ಲಿಕೇಷನ್ ಫಾರ್ ದ ಪೋಸ್ಟ್ ಎಂದು ಬರೆದು ಅದರ ಮುಂದೆ ಹುದ್ದೆಯ ಹೆಸರನ್ನು ಸಮೂದಿಸಬೇಕು. ಚಲನ್ ಮೂಲಕ(ಎಸ್ ಬಿಐ ಬ್ಯಾಂಕ್ ಮೂಲಕ ಮಾತ್ರ) ರೂ. 100(ಎಸ್ ಸಿ/ಎಸ್ ಟಿ/ಅಂಕವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ) ಅರ್ಜಿ ಶುಲ್ಕ ಸಲ್ಲಿಸಬೇಕಾಗುತ್ತದೆ.
 
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 9 ಆಗಿದೆ.
ವೆಬ್ ಸೈಟ್: www.mazdock.com.in
 
 
ನೇಮಕಾತಿ ವಿಧಾನ:
ಲಿಖಿತ ಪರೀಕ್ಷೆ, ವೈದ್ಯಕೀಯ, ಕೌಶಲ, ವಿಭಾಗ ಪರಿಣಿತಿ ಪರೀಕ್ಷೆ, ಸಂದರ್ಶನ, ದಾಖಲಾತಿ ಪರಿಶೀಲನೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.ಗುತ್ತಿಗೆ ಅವಧಿ 2 ವರ್ಷ.
 
 
ಅರ್ಜಿ ಕಳುಹಿಸಲು ವಿಳಾಸ:
ಡಿಜಿಎಂ(ಎಚ್ ಆರ್-ರೆಕ್-ಎನ್ ಇ), ರಿಕ್ರ್ಯೂಟ್ ಮೆಂಟ್ ಸೆಲ್, ಸರ್ವೀಸ್ ಬ್ಲಾಕ್-3ನೇ ಮಹಡಿ, ಮಝಗಾಂವ್ ಡಾಕ್ ಷಿಪ್ ಬಿಲ್ಡರ್ಸ್ ಲಿಮಿಟೆಡ್, ಡಾರ್ಕ್ ಯಾರ್ಡ್ ರೋಡ್ ಮುಂಬೈ-400010

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here