ಮಜಾಭಾರತ ಖ್ಯಾತಿಯ ಆರಾಧನಾ ಭಟ್‍ಗೆ ‘ಸ್ವಸ್ತಿಕ್ ಸಂಭ್ರಮ’

0
89

ಬಂಟ್ವಾಳ: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಭಾನುವಾರ ನಡೆದ ಸ್ವಸ್ತಿಕ್ ಫಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ  36ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ 12ನೇ ವರ್ಷದ ಅದ್ದೂರಿ ಸಾಮೂಹಿಕ ವಿವಾಹ ಸಮಾರಂಭ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ಮಜಾಭಾರತ ಖ್ಯಾತಿಯ ಆರಾಧನ ಭಟ್ ಅವರ ಕಲೆಯನ್ನು ಗುರುತಿಸಿ ಸ್ವಸ್ತಿಕ್ ಸಂಭ್ರಮ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ತುಳುಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್, ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಹರಿಕ್ರಷ್ಣ ಬಂಟ್ವಾಳ್, ಕ್ಷೇ.ಧ.ಗ್ರಾ.ಯೋ.ಯ ದ.ಕ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಸಾರಿಗೆ ಇಲಾಖಾಧಿಕಾರಿ ಚರಣ್, ಉದ್ಯಮಿಗಳಾದ ಹರಿಶ್ಚಂದ್ರ ಪೈ ವಾಮದ ಪದವು, ಸ.ಪ್ರ.ದ ಕಾಲೇಜು ಪ್ರಾಂಶುಪಾಲ ಪ್ರೋ ಹರಿಪ್ರಸಾದ್ ಶೆಟ್ಟಿ,ತುಳು ಅಖಾಡಮಿಯ ಸದಸ್ಯೆ ಮಲ್ಲಿಕಾ ಶೆಟ್ಟಿ,ರಾಜೇಶ್ ಪಿ. ಬಂಗೇರ,ರಂಜಿತ್ ಪುಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here