ಮಗಳನ್ನೇ ಕೊಂದ ಪೋಷಕರು..!

0
135

 
ಕೋಲಾರ ಪ್ರತಿನಿಧಿ ವರದಿ
ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ. ಸಮಾಜದ ಎದುರಿಗೆ ಮರ್ಯಾದಿಗೆ ಅಂಜಿ ಪೋಷಕರೇ ಬಾಲಕಿಯನ್ನು ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
 
 
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಮಟಂಪಲ್ಲಿ ಗ್ರಾಮದಲ್ಲಿ 17 ವರ್ಷದ ಪ್ರಿಯಾ ಎಂಬ ಬಾಲಕಿಯನ್ನು ಕೊಲೆ ಮಾಡಲಾಗಿದೆ. ಬಾಲಕಿಗೆ ಜನ್ಮ ನೀಡಿದ ತಂದೆ ಬೈರಾರೆಡ್ಡಿ ಮಗಳನ್ನು ಕತ್ತು ಹಿಸುಕಿ ಕೊಲೆಮಾಡಿದ್ದಾರೆ. ಸದ್ಯ ಮಗಳನ್ನು ಕೊಂದ ತಂದೆ ಪೊಲೀಸರ ಅತಿಥಿಯಾಗಿದ್ದಾನೆ. ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
 
 
ಹತ್ಯೆಯಾದ ಬಾಲಕಿ ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ.

LEAVE A REPLY

Please enter your comment!
Please enter your name here