ಮಗನಿಂದಲೇ ತಾಯಿಯ ಕೊಲೆ

0
318

ಕಲಬುರಗಿ ಪ್ರತಿನಿಧಿ ವರದಿ
ಮಗನಿಂದಲೇ ತಾಯಿಯ ಬರ್ಬರ ಕೊಲೆಯಾದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ತಾಯಿಯ ಶೀಲ ಶಂಕಿಸಿ ಬರ್ಬರವಾಗಿ ಪುತ್ರ ಕೊಲೆ ಮಾಡಿದ್ದಾನೆ.
 
 
ಮಗ ವಿಜಯ್ ಕುಮಾರ್ ತಾಯಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಲಕ್ಷ್ಮೀಪುರ ಬಡಾವಣೆ ನಿವಾಸಿ ಅನಿತಾ ಬಾಯಿ(45) ಕೊಲೆಯಾದ ದುರ್ದೈವಿಯಾಗಿದ್ದಾಳೆ.
 
 
‍ಘಟನೆ ಬಳಿಕ ಪುತ್ರ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕಲಬುರಗಿ ಜಿಲ್ಲೆ ವಾಡಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

LEAVE A REPLY

Please enter your comment!
Please enter your name here