ಮಕ್ಕಳ ಸಂಘಟನೆ "ಚಿಣ್ಣರ ಬಳಗ" ಸಭೆ

0
282

ವರದಿ: ಗೋವಿಂದ ಬಳ್ಳಮೂಲೆ
ಗಡಿಪ್ರದೇಶವಾದ ಕಾಸರಗೋಡಿನಲ್ಲಿ ಅಳಿವಿನ ಭೀತಿಯನ್ನು ಎದುರಿಸುತ್ತಿರುವ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದುದು ಇಲ್ಲಿನ ಕನ್ನಡಿಗರ ಕರ್ತವ್ಯ. ಈ ಮನೋಭಾವವು ಬಾಲ್ಯದಿಂದಲೇ ಮೂಡಿಬರಬೇಕು. ಕನ್ನಡ ಮಕ್ಕಳಲ್ಲಿ ನೇತೃತ್ವಶೀಲತೆಯನ್ನು ಬೆಳೆಸಿ ಕನ್ನಡ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗಾಗಿ ಸ್ವತಃ ಮುಂದೆ ಬರುವಂತಾಗಬೇಕು. ಈ ಉದ್ದೇಶದಿಂದ ಕಳೆದ 18 ತಿಂಗಳುಗಳಲ್ಲಿ 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಕನ್ನಡ ಸಂಸ್ಕೃತುಯ ಬೆಳವಣಿಗೆಗೆ ಪ್ರಯತ್ನಿಸುತ್ತಿರುವ ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನವು ಮುಳಿಯಾರು ಪರಿಸರದ 15 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳನ್ನು ಒಗ್ಗೂಡಿಸಿ ಒಂದು ಮಕ್ಕಳ ಸ್ವತಂತ್ರ ಸಂಘಟನೆಯನ್ನು ರೂಪೀಕರಿಸುವತ್ತ ಹೆಜ್ಜೆ ಇರಿಸಿದೆ.
 
 
 
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಸಭೆ ಸೇರಿದ ಮಕ್ಕಳು “ಚಿಣ್ಣರ ಬಳಗ” ಎಂಬ ಹೆಸರಿನಿಂದ ನೂತನ ಸಂಘಟನೆಯನ್ನು ರೂಪಿಸಿ ಇದೇ ತಿಂಗಳು 25ರಂದು ಮುಳಿಯಾರು ಕ್ಷೇತ್ರಂಗಣದಲ್ಲಿ ಇದರ ಆರಂಭೋತ್ಸವವನ್ನು ನಡೆಸಲು ತೀರ್ಮಾನಿಸಿದರು. ಇದಕ್ಕಾಗಿ ಒಂದು ಉಸ್ತುವಾರಿ ಸಮಿತಿಯನ್ನು ರಚಿಸಲಾಯಿತು. ಮಯೂರಿ (ಅಧ್ಯಕ್ಷೆ), ಸುಪ್ರೀತಾ (ಉಪಾಧ್ಯಕ್ಷೆ), ಶ್ರದ್ಧಾ ಹೊಳ್ಳ (ಕಾರ್ಯದದರ್ಶಿ), ಶ್ರೀರಾಮ (ಸಹ ಕಾರ್ಯದರ್ಶಿ), ಸ್ತುತಿ (ಕೋಶಾಧಿಕಾರಿ) ಯಾಗಿ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಹೆಚ್ಚು ಮಕ್ಕಳನ್ನು ಈ ಸಂಘಟನೆಯಲ್ಲಿ ಸೇರಿಸಿ ಆರಂಭೋತ್ಸವವನ್ನು ಯಶಸ್ವಿಯಾಗಿ ನಡೆಸಲು, ಬಳಿಕ ಶಾಶ್ವತ ಸಮಿತಿಯನ್ನು ರಚಿಸಿ ಕನ್ನಡ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ವಿವಿಧ ಚಟುವಟಿಕೆಗಳನ್ನು ನಡೆಸಲು ತೀರ್ಮಾನಿಸಲಾಯಿತು.
 
 
ರೂಪೀಕರಣ ಸಭೆಯ ಅಧ್ಯಕ್ಷತೆಯನ್ನು ಯಕ್ಷತೂಣೀರ ಸಂಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ ವಹಿಸಿದರು. ಮುಳಿಯಾರು ಕ್ಷೇತ್ರ ಮೆನೇಜರ್ ಸೀತಾರಾಮ ಬಳ್ಳುಳ್ಳಾಯರು ಶುಭಾಶಂಸನಾ ಭಾಷಣ ಮಾಡಿದರು. ಪೆರಡಂಜಿ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಅಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೃಷ್ಣ ಭಟ್ ಅಡ್ಕ, ಜಯಶೀಲ, ಕನ್ನಡ ಸಿರಿ ಸಂಘಟನೆಯ ಕಾರ್ಯದರ್ಶಿ ಜಯಲಕ್ಷ್ಮಿ ಸಿದ್ದನಕೆರೆ, ಸುನೀತಾ ಸುಧೀರ್ ಸಲಹೆಗಳನ್ನು ನೀಡಿದರು. ಶ್ರೀರಾಮ ಪ್ರಾರ್ಥನೆ ಹಾಡಿ ಶ್ರದ್ಧಾ ಹೊಳ್ಳ ವಂದಿಸಿದರು.

LEAVE A REPLY

Please enter your comment!
Please enter your name here