ಮಕ್ಕಳ ಭಜನಾ ಸಂಘ ಉದ್ಘಾಟನೆ

0
384

ವರದಿ-ಚಿತ್ರ: ಶ್ಯಾಮ್ ಪ್ರಸಾದ್ ಬದಿಯಡ್ಕ
ಎಳೆಯ ಮಕ್ಕಳ ಮನಸ್ಸಿಗೆ ಭಕ್ತಿಯನ್ನು ತುಂಬಿಸುವ ಕೆಲಸವನ್ನು ಹೆತ್ತವರು ಮಾಡಬೇಕಾಗಿದೆ. ಪ್ರತೀ ಮನೆಯಲ್ಲೂ ದೇವರ ಭಜನೆ ದಿನನಿತ್ಯ ಮಾಡುವುದರಿಂದ ಈ ಕಾರ್ಯ ಸಾಧಿಸಬಹುದು ಎಂದು ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ನುಡಿದರು.
 
 
ಅವರು ಆದಿತ್ಯವಾರ ಬದಿಯಡ್ಕದ ಬೇರ್ಕಡವು `ಸೀತಾಲಕ್ಷ್ಮಿ’ ನಿವಾಸದಲ್ಲಿ ನಡೆದ ಶ್ರೀಮಾತಾ ಹವ್ಯಕ ಮಕ್ಕಳ ಭಜನಾ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈಶ್ವರಿ ಬೇರ್ಕಡವು ಶುಭಾಶಂಸನೆಗೈದು ಮಾತನಾಡುತ್ತಾ ಇಂದಿನ ಕಾಲಘಟ್ಟದಲ್ಲಿ ಮಕ್ಕಳನ್ನು ಭಕ್ತಿಮಾರ್ಗಕ್ಕೆ ಕೊಂಡೊಯ್ಯಲು ದೇವರ ನಾಮ ಸಂಕೀರ್ತನೆ ಉತ್ತಮವಾಗಿದೆ. ರಾಮಕೃಷ್ಣ ಕಾಟುಕುಕ್ಕೆಯವರು ಅನೇಕ ಕಡೆಗಳಲ್ಲಿ ಭಜನಾ ತರಗತಿಗಳನ್ನು ನಡೆಸುವ ಮೂಲಕ ಈ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
 
 
ಗುರುವಂದನೆ, ಗಣಪತಿ ಸ್ತುತಿಯೊಂದಿಗೆ ಭಜನಾ ತರಗತಿಯನ್ನು ಆರಂಭಿಸಲಾಯಿತು. ರಾಮಕೃಷ್ಣ ಕಾಟುಕುಕ್ಕೆಯವರ ಶಿಷ್ಯಂದಿರಾದ ಶ್ರೀಮಾತಾ ಹವ್ಯಕ ಮಹಿಳಾ ಭಜನಾ ಸಂಘದ ಸದಸ್ಯರು ಮುಂದಿನ ದಿನಗಳಲ್ಲಿ ತರಗತಿಗಳನ್ನು ನಡೆಸಿಕೊಡಲಿದ್ದಾರೆ.
ಈ ಸಂದರ್ಭದಲ್ಲಿ ಮಹಿಳಾ ಭಜನಾ ಸಂಘದ ಸದಸ್ಯರು, ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. 22 ಜನ ಮಕ್ಕಳು ತರಗತಿಗೆ ಸೇರ್ಪಡೆಗೊಂಡಿದ್ದರು.

LEAVE A REPLY

Please enter your comment!
Please enter your name here