ಮಕ್ಕಳು ದೇಶದ ಸಂಪತ್ತು ಅವರ ಹಕ್ಕುಗಳನ್ನು ರಕ್ಷಿಸಿಸುವುದು ನಮ್ಮೇಲ್ಲೆರ ಹೊಣೆ

0
425

 
ಮಂಗಳೂರು ಪ್ರತಿನಿಧಿ ವರದಿ
‘ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ-2016’ ಹಾಗೂ ಜಾಗತಿಕ ಮಕ್ಕಳ ಹಕ್ಕುಗಳ ದಿನಾಚರಣೆ ಅಂಗವಾಗಿ ಪಣಂಬೂರು ಕಡಲ ತೀರದಲ್ಲಿ ಕಳೆದ ಭಾನುವಾರ ಚೈಲ್ಡ್ ಲೈನ್ -1098 ಕುರಿತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
 
 
 
 
ಚೈಲ್ಡ್ ಲೈನ್ ಮಂಗಳೂರು-1098 ಇದರ ನಗರ ಸಂಯೋಜಕರಾದ ಯೋಗಿಶ್ ಮಲ್ಲಿಗೆಮಾಡು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನ್ನಾಡುತ್ತಾ, ಮಕ್ಕಳು ದೇಶದ ಸಂಪತ್ತು ಅವರ ಹಕ್ಕುಗಳನ್ನು ರಕ್ಷಿಸಿಸುವುದು ನಮ್ಮೇಲ್ಲೆರ ಹೊಣೆಯಾಗಿದ್ದು, ಮಕ್ಕಳನ್ನು ಗೌರವದಿಂದ ಕಾಣಬೇಕು, ಮಕ್ಕಳ ಮೇಲಾಗುವ ದೌರ್ಜನ್ಯವನ್ನು ತಡೆಯುವಲ್ಲಿ ಮತ್ತು ಅವುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವಲ್ಲಿ, ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ ಕಾರ್ಯಕ್ರಮವನ್ನು ಭಾರತ ದೇಶದಾದ್ಯಂತ ಎಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ, ಮಕ್ಕಳ ರಕ್ಷಣೆಗಾಗಿಯೇ ಚೈಲ್ಡ್ ಲೈನ್ -1098 ಎಂಬ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ತುರ್ತು ಸಂದರ್ಭದಲ್ಲಿ ಇದರ ಸದುಪಯೋಗವನ್ನು ಮಕ್ಕಳು ಪಡೆಯಬೇಕೆಂದರು. ಚೈಲ್ಡ್ ಲೈನ್ -1098 ಬಗ್ಗೆ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
 
 
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚೈಲ್ಡ್ ಲೈನ್ ಮಂಗಳೂರು-1098, ಕೇಂದ್ರ ಸಂಯೋಜಕರಾದ ಸಂಪತ್ ಕಟ್ಟಿಯವರು ‘ಜಾಗತಿಕ ಮಕ್ಕಳ ಹಕ್ಕುಗಳ ದಿನಾಚರಣೆ’ ಕುರಿತು ಮಾತನಾಡುತ್ತ ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳು ಒಡಂಬಡಿಕೆ ಜಾರಿಗೆ ಬಂದು ಸುಮಾರು 26ವರ್ಷ ಆಯಿತು, ಈ ಒಡಂಬಡಿಕೆಯಲ್ಲಿ ಮಕ್ಕಳು ಎಂದರೆ ಯಾರು, ಅವರಿಗೆ ಎನೆಲ್ಲಾ ಹಕ್ಕುಗಳು ಇವೆ, ಮಕ್ಕಳಿಗೆ ಇರುವ ಹಕ್ಕುಗಳು ಯಾವೂವು ಎಂಬುದು ವಿವರವಾಗಿ ಹೇಳಲಾಗಿದೆ. ಮಕ್ಕಳಿಗೆ ಅವರ ಹಕ್ಕುಗಳ ಉಲ್ಲಂಘನೆ ಆಗದಂತೆ ಯಾವ ರೀತಿ ಹೋರಾಡಬಹುದು, ಮಕ್ಜಕಳಿಗೆ ತೊಂದರೆ ಆದಾಗ ಯಾವ ರೀತಿ ಅವರು ಅದರ ವಿರಿದ್ದ ಹೋರಾಡಬೇಕು ಮತ್ತು ಅದಕ್ಕೆ ಇರುವ ಬೇರ ಬೇರೆ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.
 
 
 
ಚೈಲ್ಡ್ ಲೈನ್ ಮಂಗಳೂರು-1098 ತಂಡ ಸದಸ್ಯರು ಗೊಂಬೆ ಆಟ ಪ್ರದರ್ಶನದ ಮಾಡುವುದರ ಮೂಲಕ ಮಕ್ಕಳ ಮೇಲೆ ಆಗುತ್ತಿರುವ ದೈಹಿಕ, ಮಾನಸಿಕ ಮತ್ತು ಲೈಂಗಿಕ ಕಿರುಕುಳ ವಿರುದ್ದ ಯಾವ ರೀತಿ ಹೋರಾಡಬಹುದು ಮತ್ತು ಇಂತಹ ಸಮಸ್ಯೆಗಳು ಆದಾಗ ಯಾವೂದರ ಸಹಾಯ ಪಡೆದುಕೊಳ್ಳಬಹುದು ಎನ್ನುವುದರ ಕುರಿತು ಮಾಹಿತಿಯನ್ನು ನೀಡಿದರು. ಚೈಲ್ಡ್ ಲೈನ್ -1098ರ ಮಳಿಗೆಯನ್ನು ಪ್ರದರ್ಶನಕ್ಕೆ ಇಡಲಾಯಿತು ಹಾಗೂ ಮಾಹಿತಿ ಕರಪತ್ರಗಳನ್ನು ನೀಡಲಾಯಿತು.
 
 
ಚೈಲ್ಡ್ ಲೈನ್ ಮಂಗಳೂರು-1098,ತಂಡ ಸದಸ್ಯರಾದ ನಾಗರಾಜ್ ಪಣಕಜೆಯವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಂಡ ಸದಸ್ಯೆ ಪವಿತ್ರ ಜ್ಯೋತಿಗುಡ್ಡೆ ಧನ್ಯವಾದ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಚೈಲ್ಡ್ ಲೈನ್ ಮಂಗಳೂರು-1098 ಸಿಬಂಧಿಗಳು, ಸಂಘ ಸಂಸ್ಥೆಯ ಸದಸ್ಯರುಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಮುಖಾಂತರ ಸುಮಾರು 3000ಕ್ಕೂ ಹೆಚ್ಚಿನ ಜನರಿಗೆ ಚೈಲ್ಡ್ ಲೈನ್ -1098ರ ಕುರಿತು ಮಾಹಿತಿ ನೀಡಲಾಯಿತು.

LEAVE A REPLY

Please enter your comment!
Please enter your name here