ಮಕ್ಕಳಲ್ಲಿ ಮಧುಮೇಹ

0
605

ಅಂಕಣ: ಡಾ.ಸತೀಶ ಶಂಕರ್ ಬಿ
ಮಕ್ಕಳಲ್ಲಿಯೂ ಇಂದು Type-II ಮಧುಮೇಹ ಕಾಣಿಸಿಕೊಳ್ಳುತ್ತಿರುವುದು ವಿಷಾಧಕಾರಿ. ಮಕ್ಕಳಲ್ಲಿ ಹೆಚ್ಚಾಗಿ Type -I ಮಧುಮೇಹ ಕಾಣಿಸಿಕೊಳ್ಳುತ್ತದೆ. ಇನ್ನೂ ಕೆಲವರಲ್ಲಿ ಎರಡೂ ವಿಧವಾದ ಮಧುಮೇಹ ಇರುವುದು. ಇದಕ್ಕ ಮಿಶ್ರ ಮಧುಮೇಹ ಎಂದು ಕರೆಯಲಾಗುತ್ತದೆ. Type -I ಮಧುಮೇಹ ಇನ್ಸುಲಿನ್ ಅನುತ್ಪಾದನೆ ಅಥವಾ ಇನ್ಸುಲಿನ್ ಉತ್ಪಾದನೆಯ ಕೊರತೆಯಿಂದ ಬರುತ್ತದೆ. ಇವರಿಗೆ ಇನ್ಸುಲಿನ್ ಇಂಜೆಕ್ಷನ್ ಅವಶ್ಯಕತೆಯಿರುತ್ತದೆ.
ದೊಡ್ಡವರಲ್ಲಿ ಬರುವ Type-II ಮಧುಮೇಹ ಮಕ್ಕಳಲ್ಲಿ ಬರುವುದಕ್ಕೆ ಕಾರಣಗಳು:
* ಮಕ್ಕಳಲ್ಲಿ ಸ್ಥೂಲಕಾಯ(ಬೊಜ್ಜು)
* ವ್ಯಾಯಾಮದ ಕೊರತೆ ಮತ್ತು ಜಂಕ್ ಫೂಡ್ ಅತಿಯಾದ ಸೇವನೆ
 
 
ಆರೋಗ್ಯಕರ ಮಕ್ಕಳಲ್ಲಿ ಗ್ಲುಕೋಸ್ ಕ್ರಿಯೆ:
ಆರೋಗ್ಯಕರ ಮಕ್ಕಳಲ್ಲಿ ಜೀರ್ಣಾಂಗಗಳ ಕ್ರಿಯೆಯಿಂದ ಆಹಾರ ಗ್ಲುಕೋಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಆಗ ಮೇದೋಜೀರಕಾಂಗದಿಂದ ಇನ್ಸುಲಿನ್ ಬಿಡುಗಡೆಯಾಗುತ್ತದೆ. ಇನ್ಸುಲಿನ್ ಸಹಾಯದಿಂದ ಜೀವಕೋಶಗಳು ಬಾಗಿಲು ತೆರೆಯುತ್ತದೆ. ಇದರಿಂದ ರಕ್ತದಲ್ಲಿರುವ ಗ್ಲುಕೋಸ್ ಜೀವಕೋಶಗಳಿಗೆ ಅವಿರೋಧವಾಗಿ ದೊರೆಯುತ್ತದೆ. ಜೀವಕೋಶಗಳು ಶಕ್ತಿಗಾಗಿ ಇದನ್ನು ಉಪಯೋಗಿಸುವುದರಿಂದ ರಕ್ತದಲ್ಲಿ ಗ್ಲುಕೋಸ್ ಸಮತೋಲನದಲ್ಲಿರುತ್ತದೆ.
 
 
ಯಾವಾಗ ಮಧುಮೇಹ ಕಾಣಿಸಿಕೊಳ್ಳುವುದು:
ಇನ್ಸುಲಿನ್ ಉತ್ಪಾದನೆ ಕೊರತೆ ಅಥವಾ ಇನ್ಸುಲಿನ್ ಗೆ ಶರೀರ ಸೂಕ್ತವಾಗಿ ಸ್ಪಂದಿಸದೇ ಇದ್ದಾಗ ಮಧುಮೇಹ ಮಕ್ಕಳಲ್ಲಿ ಕಾಣಿಸುತ್ತದೆ.
 
ಮಕ್ಕಳಲ್ಲಿ ಮಧುಮೇಹ ಲಕ್ಷಣಗಳು:
* ತೂಕ ಕಡಿಮೆಯಾಗುವುದು
* ಅತಿಯಾದ ಹಸಿವು, ಬಾಯಾರಿಕೆ
* ಸುಸ್ತು, ಉಸಿರಾಟದಲ್ಲಿ ಕಷ್ಟವಾಗುವುದು
* ಬಾಯಿ ಒಣಗುವುದು
* ಗಾಯಗಳು ವಾಸಿಯಾಗದೇ ಇರುವುದು
 
 
 
ತಡೆಗಟ್ಟುವಿಕೆ:
* ಮಕ್ಕಳ ತೂಕ ವ್ಯಾಯಾಮದ ಬಗ್ಗೆ ಮಾರ್ಗದರ್ಶನ
* ಜಂಕ್ ಫುಡ್ ನಿಂದ ದೂರವಿರಿ
* ಮಕ್ಕಳ ತಪಾಸಣೆ
* ಶಾಲೆಗಳಲ್ಲಿ ಈ ಬಗ್ಗೆ ತಿಳುವಳಿಕೆ ಕಾರ್ಯಕ್ರಮ
* ಶಾಲೆಗಳಲ್ಲಿ ಮಧುಮೇಹ ವಾರ್ಷಿಕ ತಪಾಸಣೆ
* ಮಕ್ಕಳಿಗೆ ಪಠ್ಯೇತರ ಚಟುವಟಿಕೆ, ಆಟೋಟಗಳಿಗೆ ಪ್ರೋತ್ಸಾಹ
* ಮಕ್ಕಳಿಗೆ ವ್ಯಾಯಾಮ
 
ಡಾ.ಸತೀಶ ಶಂಕರ್ ಬಿ
[email protected]

LEAVE A REPLY

Please enter your comment!
Please enter your name here