ಮಂಥರಾಂತರಂಗ!

0
379

ಮಸೂರ ಅಂಕಣ: ಆರ್ ಎಂ ಶರ್ಮ
ತಲೆಬರಹದ ಒಡಲು-ಮಂಥರೆಯ ಆಂತಯ೯ ಅಥಾ೯ತ್ ಆಕೆಯ ಒಡಲಾಳದ ಒಲವು-ಬಲವು-ಉಮೇದು-ಇರಾದೆ ಏನೂ ಆಗೈರವಲ್ಲದು ಏಕೆ?
ಒಟ್ಟಿನಲ್ಲಿ ಮಂಥರೆಗೆ ಏನೋ ಕಸಿವಿಸಿ-ಅಳಲು-ತೊಳಲು-ದುಃಖ-ದುಮ್ಮಾನ-ದುಗುಡ-ದಿಗಿಲು ಎಲ್ಲವೂ ಸರಿಯೇ.
ಇವೆಲ್ಲಾ ಏಕೆ?
ಅದೇ ಈ ನಮ್ಮ ಪ್ರಸ್ತುತಿಯ ತಿರುಳು-ಬಂಡವಾಳ.
ಸಂಸ್ಕೃತ ಕಾವ್ಯದ ಮೇರು ಕೃತಿ-ಉತ್ತರ ರಾಮಚರಿತ-ಮಹಾಕವಿ ಭವಭೂತಿಯ ಕೊಡುಗೆ ಸಾರಸ್ವತಲೋಕಕ್ಕೆ.
ಅಲ್ಲಿ ಕವಿ ವಾಣಿ-
“ಮಂಥರಾ ನಿಮ೯ಮಂಥ!”.
ಇದರ ತಜು೯ಮೆ ಕನ್ನಡಕ್ಕೆ-ಮಂಥರೆಯು ಕಡೆದಳು ಎಂತ.
ಕಡೆಯುವುದು ಹಾಲನ್ನು ಮೊಸರು ಮಾಡಿ ಕಡೆದು ಬೆಣ್ಣೆತೆಗೆಯುವುದು ವಾಡಿಕೆ.
ಈ ಕಡೆಯುವ ಕಾಯಕಕ್ಕೆ-ಮಂಥನ ಎಂತ ಹೇಳುವುದು ಸವೇ೯ಸಾಮಾನ್ಯ.
ಗಹನವಾದ-ವಿಚಾರ-ವಿಮಶೆ೯-ಆಳವಾದ ಅಧ್ಯಯನ ಇಲ್ಲೆಲ್ಲಾ ಅಭಿವ್ಯಕ್ತಿಗೆ ಹೇಳುವುದು-“ಮಂಥನ”.ಎಂತ.
ಪುರಾಣದಲ್ಲಿ-ದೇವದಾನವರು ಕ್ಷೀರಸಾಗರವನ್ನುಕಡೆಯಲು ಮಂದರಪವ೯ತ ಮತ್ತು ಆದಿಶೇಷನನ್ನು ಬಳಸಿದರು ಎಂತ.
ಅದರ ಉಪಲಭ್ದ-“ಅಮೃತ”.
ನಂತರ ಅಮೃತಕ್ಕೆ ಹಾತೊರೆದು-ಬಾಯ್ದೆರದು-ಹೊಡೆದಾಟ-ಕಚ್ಚಾತ-ಕಿರುಚಾಟ-ಪರದಾಟ.
ಆ ಕಲದಲ್ಲೂ ಮೇಲಾಟ ಇದ್ದದ್ದೆ.
ದೇವತೆಗಳಿಗೆ ಅಮೃತ.
ದಾನವರಿಗೆ ಇಲ್ಲ.
ಭುದ್ದಿವಂತ ರಾಹು ಕೇತು ಗಳು ದೇವ್ಸಗಣಕ್ಕೆ ನುಸುಳಿದರು-ಪಕ್ಷತೊರೆದರು ಅಮೃತಕ್ಕಾಗಿ.
ಶ್ರೀ ಕೃಷ್ನ(ವಿಷ್ಣು) ನೋಡಿದ-ನಂತರ ಮೋಸಮಾಡಿದ.
ಅಮೃತ ಪೂತಾ೯ ಒಡಲಿಗೆ ಇಳಿಯಲಿಲ್ಲ.
ಕತ್ತೈನ ಮೇಲ್ಭಾಗ-ರಾಹು ವಿಗೆ,ಬಾಲದ ಕೆಳಭಾಗ ಕೇತಿವಿಗೆ ಅಮೃತ ಸ್ಪಶ೯-ದಿವ್ಯ-ಅಜೇಯ-ಅಮೋಘ.
ಈ ನಡುವೆ ಹಾಲಾಹಲ ವಿಷ ಪರಮೇಶ್ವರನಿಗೆ.
ಕಂಠದಲ್ಲಿಯೇ ನಿಲ್ಲಿಸಿಕೊಂಡ-ನೀಲಕಂಠನಾದ.
ಇದು ಸಮುದ್ರ ಮಥನ-ಕಡೆತ-ಭಣಿತ ಇಲ್ಲಿ.
ಇದು ಏಕೆ ಇಲ್ಲಿ ಎಂತ ನಮ್ಮನ್ನು ಕೇಳಿದವರೇ ಎಲ್ಲಾ ನಮ್ಮ ಬಳಗದ ಜನ.
ಅದಕ್ಕೆ ಕಾರ್‍ಅಣ-ಕ್ಷಮೆ-ಸ್ತ್ರೀಯರಿಗೆ ಮಾಡಿಸಿಟ್ಟದ್ದು-ಕಾರಣ-ಕ್ಷಮಯಾ ಧರಿತ್ರಿ ಎಂಬ ಭರತವಾಕ್ಯದ ಸೊಗಡು.
ಹಾಗಾದರೆ ಕ್ಷಮೆಯನ್ನು ಕಳೆದುಕೊಂದ ಸ್ತ್ರೀಯರಿಲ್ಲವೇ-ಇರಲಿಲ್ಲವೇ-ಮುಂದೆ ಇರಲಾರರೇ-ಇವೇ ಪ್ರಶ್ನೆಗಳ ಸರಮಾಲೆ ನಮ್ಮೆದುರಿಗೆ.
ಪ್ರಶ್ನೆಗೆ ಉತ್ತರವೇ ನಮ್ಮ ಈ ಬರಹ.ಶರಥನಿಗೆ ಯುದ್ಧದಲ್ಲಿ ತನ್ನ ಎರಡು ಬೆರಳುಗಳನ್ನು ರಥದ ಗಾಲಿಗೆ ಕೀಲಾಗಿ ಬಳಸಲು ತ್ಯಾಗಮಾಡಿದ ಮಹಾನ್
ದನಶಿಖಾಮಣಿ ಕೈಕೆಯಿ ಪತಿಯ ಜಯದ ಮೇರುತನಕ್ಕೆ ನೊವನ್ನು ಸಹಿಸಿಕೊಂಡು ಸಹನೆ ಮೆರೆದುದು ಪುರಾಣ.
ಮಹಾರಾಜ ದಶರಥ ಕೊಟ್ಟವರಗಳನ್ನು ಪೂರೈಸಲು ಮರೆತ.
ಜಯದ ಹಮ್ಮು-ಬಿಮ್ಮು ಅವನಿಗೆ ಶೋಭೆ-ಕೈಕೇಯಿಗೆ ಕ್ಷೋಭೆ-ನಿವಾರಣೆಗೆ ಪರಮಾಪ್ತದಾಸಿ-ಮಂಥರಾ ಸ್ವಾಮಿನಿಗೆ ಒದಗಿದಳು,ಒದರಿದಳು-ಒದ್ದಾಡಿದಳು.
ನೆನಪಿಸಿದಳು ವರಗಳನ್ನು ಕೇಳಲು.
ಈಗ ಕ್ಷೋಭೆ ಮಹಾರಾಜನಿಗೆ-ಕಾರಣ-ರಮನಿಗೆ ವನವಾಸ,ಭರತನಿಗೆ ಪಟ್ಟಾಭಿಷೇಕ-ಎರಡು ವರಗಳ ವರಾತ-ಆಘಾತ.
ರಾಜ ಬಿದ್ದ ಮತ್ತೆ ಮೇಲೇಳಲಿಲ್ಲ.
ಕೈಕೇಯಿ ಕ್ಷಮೆಗೆ ಸ್ತ್ರೀ,ಮಂಥರಾ ಸ್ತ್ರೀ ಆದರೂ ಅಪರಾಧಿನಿ-ಲೋಕದ ದೃಷ್ಟಿಯಲ್ಲಿ.
ಕ್ಷಮೆಗೆ ಬೆಲೆ,ದಾಸ್ಯಕ್ಕೆ ಇಲ್ಲ.
ಯಮನ ಸೋಲಿಗೆ ಬರೋಣ-ಸತ್ತ ಸತ್ಯವಾನನ್ನು ಬದುಕಿಸಿಕೊಂಡಳು ಸಾವಿತ್ರಿ-ಯಮನ-ಕರುಣೆ-ದಯೆ-ಕ್ಷಮೆ-ಹೇಗೂ ಇರಲಿ ಗಂಡಸಿಗೂ ಹೆಣ್ಣು ಹೃದಯ.
ಇದನ್ನು ಲೋಕ ಮೆಚ್ಚಿತು -ಕೊಂಡಾಡಿತು-ಯಮನಿಗೆ ಬೆಲೆ-ಕಾರಣ ಬೆಲ್ಲದ ಸವಿ ಸಾವಿತ್ರಿಗೆ.
ಇಲ್ಲಿ ಕ್ಷಮೆಗೆ ಗಂಡಸು ದಿವ್ಯ-ದೇದೀಪ್ಯಮಾನ-ಅನನ್ಯ-ಸವ೯ಮಾನ್ಯ.
ಮತ್ತೂ ಮುಂದಕ್ಕೆ ಹೋಗೋಣ-
ದಾಸರು ಹಾಡಿದರು ಕೊಂಡಾಡಿದರು-ಏನಂತ-
“ಶಿಲೆಯ ಮೆಟ್ಟಿ ಕುಲಕ್ಕೆ ತಂದೆ,
ಬಲಿಯ ಬೇಡಿ ಸತ್ಪದವಿಯ ಇತ್ತೆ”-
ಇವೆರದೂ-ವರಗಳೇ-ಕರುಣೆಯೇ-ಕ್ಷಮೆಯೇ-ಚಿಂತನ -ಮಂಥನ ಅವಶ್ಯಕವೇ ಸರಿ.
ತಾಯಿ ರೇಣುಕೆಯನ್ನು ಬದುಕಿಸಿದ ಮಹಷಿ೯ ಜಮದಗ್ನಿ ಮಗನ ಪರುಶುರಾಮನ ಬೇಡಿಕೆಗೆ-ಇದೇನು ಕ್ಷಮೆಯೇ ಅಲ್ಲವೇನು?
ತಂದೆ ರೋಮಪಾದನು ಮಗನಾದ ಋಶ್ಯಶೃಂಗನನ್ನು-ಸಾಕಿದ-ಸಲುಹಿದ-ಬೆಳಿಸಿದ-ಇಲ್ಲಿ ಮಾತೃತ್ವ ಕ್ಷಮೆಯಿಂದ ಕೂಡಿರಲಿಲ್ಲವೇ-ಕಾರಣ ಮಗುವಿನ ಸಕಲ-
ಹೊಲಸು-ಹಳಸು ಸಹಿಸಿಕೊಂಡದ್ದಕ್ಕೆ?
ಮಹಷಿ೯ ಕಣ್ವರು ಶಕುಂತಳೆಯನ್ನು ಮಗಳಂತೆ-ಸಾಕಿ-ಸಲುಹಿ-ಪೋಷಿಸಿದುರಲ್ಲಿ ಮಾತೃತ್ವ-ಕ್ಷಮೆಯಿಲ್ಲವೇ?
ಮಹಷಿ೯ ವಾಲ್ಮೀಕಿ ಸೀತಾಮಾತೆ-ಗಭಿ೯ಣಿಯನ್ನು ರಕ್ಷಿಸಿ-ಸಾಕಿ-ಸಲುಹಿ-ಪೋಷಿಸಿದರು.
ಇಲ್ಲಿ ಮಾತೃತ್ವ-ಕ್ಷಮೆಗೆ ಸಲ್ಲದೇ?
ಮಹಷಿ ವಾಜಶ್ರವಸ್ಸು-ತನ್ನ ಸ್ವಂತ ಮಗನಾದ ನಚಿಕೇತನನ್ನು-ಯಮನಲ್ಲಿಗೆ ಅಟ್ಟಿದ-ತನ್ನ-ದಪ೯-ಅಧಿಕಾರದ ಭೂಮಿಕೆಯಲ್ಲಿ.
ಯಮನ ಮನೆ ಬಾಗಿಲು ಕಾದು-ಯಮನಿಂದ ಮೃತ್ಯುವಿನ ರಹಸ್ಯ ಪಡೆದು ವಿಜೃಂಭಿಸಿದ ಬಾಲಕ ನಚಿಕೇತ-ಯಮನನ್ನು ಸೋಲಿಸಿದನೆ?-ಗೆದ್ದನೇ?-ಯಮ ಕ್ಷಮಾಪರನಾದನೇ?-ಕಾರುಣ್ಯದ ಸೆಲೆಯಾದನೇ?
ಹೇಗಾದರೂ ಇರಲಿ ಯಮನಿಂದ ವಾಪಸ್ಸು ಬಂದ ಜೀವ-ಯಮನಿಗೆ ಕ್ಷಮೆ ಇದೆ ಎಂತ ಪ್ರತಿಪಾದಿಸಲ್ಪಟ್ಟರೆ ಅನುಚಿತವೇ?
ಹಾಗಾದರೆ ಕ್ಷಮಾಗುಣಕ್ಕೆ ಸ್ತ್ರೀಲಿಂಗ ಮಾತ್ರವೇ-ಅಥಾ೯ತ್-ಸ್ತ್ರೀ ಮಾತ್ರವೇ?
ಕ್ಷಮೆಗೆ ಲಿಂಗಾತ್-“ಅಂಗ” ಮುಖ್ಯವಲ್ಲವೇ?
ಇದೇ ಸುತಕ೯.
ಇದಕ್ಕೆ ವಿರೋಧ ವಿತಕ೯ ಅಷ್ಟೇ.
ಇನ್ನು ಪರಾತ್ಪರದ ಸಂಗತಿಗೇ ಬರೋಣ-
“ಚತುಃಷಷ್ಟಿ ಕಲಾಮಯಃ”,
“ಚತುಃ ಷಷ್ಟಿ ಕಲಾಮಯೀ”,
ಎಂದರೆ ಲಿಂಗಕ್ಕೂ ಮೀರಿ ಪರಾತ್ಪರವು ೬೪ ಗುಣಗಳ ಖಣಿ ಎಂತ.
ದೈವಕ್ಕೇ ಲಿಂಗಭೇದವಿಲ್ಲ.
ಮತ್ತೇಕ ಸಲ್ಲದ-“ಕ್ಶಮಯಾ ಧರಿತ್ರಿ”-ಎಂತ ಸೀರೆಸೆರಗು ಹಿಡಿದು ಸಾಗುವುದು?
ಇನ್ನು ನೋಡೋಣ ಸ್ತ್ರೀ ಕೋಪವನ್ನು-
ಮಹಾತಾಯಿ ಚಾಮುಂಡೇಶ್ವರೀ,ಆದಿಶಕ್ತಿ ಮುಕಾಂಬಿಕ ಇವರುಗಳು ಕೋಪಗೊಳ್ಳಲ್ಲಿಲ್ಲವೇ-ರಾಕ್ಷಸರ ಅವಸಾನವಾಗಲಿಲ್ಲವೇ?
ತ್ರೇತಾಯುಗದಲ್ಲಿ ರಾಮ-ರಾವಣರ ಯುದ್ಧಕ್ಕೆ ಸ್ತ್ರೀ ಸೀತೆ ಅಲ್ಲವೇ ಕಾರಣ?
ದ್ವಾಪರ ಯುಗದಲ್ಲಿ ಮಹಾಭಾರತದ ಯುದ್ಧಕ್ಕೆ ದ್ರೌಪದಿ ಕಾರಣವಲ್ಲವೇ?
ಯುದ್ಧದ ಪರಿಮಾಣ-ಪರಿಣಾಮ ಸ್ವಯಂ ವೇದ್ಯ.
ಇನ್ನು ಧರಿತ್ರಿ-ಭೂಮಿ-ನೆಲದ ಮಾತಿಗೇ ಬರೋಣ-
ಭೂಕಂಪ,ಬೆಂಕಿಉಗುಳುವ ಬೆಟ್ಟಗಳು,ಪ್ರಳಯದ ನದಿಗಳು ಇವೆಲ್ಲಾ ಭೂಮಿಯಲ್ಲಿಯೇ ಅಲ್ಲವೇ ಮಹಾನ್ ಕ್ಷೋಭೆಯನ್ನು ಉಂಟುಮಾಡುವುದು-ಮಾಡಿದುದು?
ಈ ಕಾಯಕಕ್ಕೆ ಕ್ಷಮೆ ಅಲ್ಲ ಎಂದರೆ ಯಾರಾದರೂ ಅಲ್ಲಗಳೆಯುವರೇ?
ಕ್ಷಮಾ ಗುಣವು ಮಾತೃಹೃದಯದ ಆಭರಣವೇ ವಿನಹ ಲಿಂಗಾಧೀನವಲ್ಲ.
ಅದು ಸತ್ಯಾತ್ ಸತ್ಯವಾಗಿ “ಅಂಗಾಧೀನ”.
ಇದನ್ನು ಬಲ್ಲವರು,ಬಲ್ಲಲು ಯೋಗ್ಯರೇ-
ಆರ್.ಎಂ.ಶಮ೯,

LEAVE A REPLY

Please enter your comment!
Please enter your name here