ಮಂತ್ರಿಮಾಲ್ ಹಿಂಭಾಗದ ಗೋಡೆ ಕುಸಿತ

0
509

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನ  ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದಾದ  ಮಂತ್ರಿಮಾಲ್ ನ ಹಿಂಭಾಗದ ಗೋಡೆ ಕುಸಿತವಾಗಿದೆ. ಗೋಡೆ ಕುಸಿತದಿಂದ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನ್ನೆಚ್ಚರಿಕೆಯಿಂದ ಮಾಲ್ ನಲ್ಲಿದ್ದ ಎಲ್ಲಾ ಜನರನ್ನು ತೆರವು ಮಾಡಲಾಗಿದೆ.
 
 
 
ಸಿಬ್ಬಂದಿಗಳು ಮಾಲ್ ನಿಂದ ಎಲ್ಲರನ್ನೂ ಹೊರಗೆ ಕಳುಹಿಸಿದ್ದಾರೆ. ಮಲ್ಲೇಶ್ವರಂ ಮಂತ್ರಿ ಮಾಲ್ ನಲ್ಲಿ ಸಿನಿಮಾ ಶೋ ಸಹ ಅರ್ಧಕ್ಕೆ ಸ್ಥಗಿತವಾಗಿದೆ.
 
ಎಸಿ ಪೈಪ್ ತುಂಡಾಗಿ 1 ರಿಂದ 3ನೇ ಮಹಡಿವರೆಗೂ ನೀರು ಬಂದಿದೆ. ನೀರು ಸಂಗ್ರಹದಿಂದ ಹಿಂಭಾಗದ ಗೋಡೆ ಕುಸಿತವಾಗಿದೆ ಎಂದು ಶಂಕಿಸಲಾಗಿದೆ.
 
ಮಾಲ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ 45 ವರ್ಷದ ಲಕ್ಷ್ಮಮ್ಮ ಸೇರಿ ಇಬ್ಬರು ಮಹಿಳಾ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದ್ದು, ಗಂಭೀರ ಗಾಯಗೊಂಡಿರುವ ಲಕ್ಷ್ಮಮ್ಮ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳು ಲಕ್ಷ್ಮಮ್ಮ ನನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಆಗಮಿಸಿದ್ದಾರೆ.
 
ಮೆಟ್ರೋ ಸಂಚಾರಕ್ಕೆ ಅಡ್ಡಿ ಇಲ್ಲ
ಮೆಟ್ರೋ ಜಾಗದಿಂದ 50 ಮೀಟರ್ ದೂರದಲ್ಲಿ ಮಂತ್ರಿಮಾಲ್ ನ ಹಿಂಭಾಗದ ಗೋಡೆ ಕುಸಿತವಾಗಿದೆ. ಹೀಗಾಗಿ ಮೆಟ್ರೋ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಸಂಪಿಗೆ ಮೆಟ್ರೋ ನಿಲ್ದಾಣದ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here