ಮಂತ್ರವಾದಿಯ ಉದರದಲ್ಲಿ ವೇದನೆಯೆದ್ದಿತು!!!

0
1077

ನಿತ್ಯ ಅಂಕಣ – ೩

ಮಂಜೇಶ್ವರ ಪರಿಸರದ ಮನೆಯೊಂದರಲ್ಲಿ ಮದುವೆಯ ಕಾರ್ಯಕ್ರಮ ಇದ್ದಿತ್ತು. ಮನೆಯವರು ನಿತ್ಯಾನಂದ ಸ್ವಾಮೀಜಿ ಅವರ ಭಕ್ತರಾಗಿದ್ದರು. ಹಾಗಾಗಿ ಮನೆಯವರು ಶುಭ ಕಾರ್ಯಕ್ರಮಕ್ಕೆ ನಿತ್ಯಾನಂದ ಸ್ವಾಮೀಜಿ ಅವರಿಗೆ ಆಮಂತ್ರಣ ನೀಡಿದ್ದರು. ಅಂತೆಯೇ ಆ ಊರಿನಲ್ಲಿರುವ ಮಂತ್ರವಾದಿಯೊರ್ವರಿಗೂ ಆಮಂತ್ರಣ ನೀಡಿದ್ದರು. ಮನೆಯ ಯಜಮಾನರು ಮರದ ಖರ್ಚಿಯನ್ನು ನಿತ್ಯಾನಂದರಿಗೆ ಕುಳಿತುಕೊಳ್ಳಲು ವ್ಯವಸ್ಥೆಗೊಳಿಸಿದ್ದರು. ಮದುವೆಗೆ ಬಂದವರೆಲ್ಲರೂ ನಿತ್ಯಾನಂದ ಸ್ವಾಮೀಜಿಗಳ ದರ್ಶನ ಪಡೆದು, ಕಾಲಿಗೆರಗಿ ನಮಸ್ಕರಿಸುತ್ತಿದ್ದರು. ಕೆಲವರು ಮಂತ್ರವಿದ್ಯೆಯ ಭಯದಿಂದಾಗಿ ಮಂತ್ರವಾದಿಗೂ ಭಯದಿಂದ ನಮಸ್ಕರಿಸುತ್ತಿದ್ದರು.

ಚಿತ್ರ ಕೃಪೆ: ಅಂತರ್ಜಾಲ

ಮದುವೆಗೆ ಆಹ್ವಾನ ನೀಡಿದವರ ಮನೆಯಲ್ಲಿ, ನಿತ್ಯಾನಂದರಿಗೆ ನೀಡುತ್ತಿರುವ ಸತ್ಕಾರ, ಜನರು ನೀಡುತ್ತಿರುವ ಗೌರವ ಕಂಡು ಮಂತ್ರವಾದಿ ಒಳಗೊಳಗೆ ಅಸೂಯೆ ಪಟ್ಟರು. ನಿತ್ಯಾನಂದರಿಗೆ ಸನಿಹ ಆಹ್ವಾನ ಇತ್ತರು. “ನೀವು ನಿಜವಾಗಿ ದೊಡ್ಡ ವ್ಯಕ್ತಿ ಹೌದಾದರೆ… ನಾನು ನೀಡಿದ ಒಂದು ವಸ್ತುವನ್ನು ತಾವು ಸೇವಿಸಬೇಕು” ಎಂದು ಹೇಳಿದರು. ನಿತ್ಯಾನಂದರು ಅವರ ಅಪ್ರಯೋಜಕ ಮಾತಿಗೆ ಕಿವಿಗೊಡದೆ ಮೊದಲು ಸುಮ್ಮನಾದರು. ಮತ್ತೆ ಮತ್ತೆ ಪಂಥ ಆಹ್ವಾನ ನೀಡುವಂತೆ ಅದೇ ಮಾತನ್ನು ಮಂತ್ರವಾದಿ ಹೇಳಲಾರಂಭಿಸಿದನು. “ನಾನು ತಿನ್ನಲೇ ಬೇಕೇ..?” ಎಂದು ನಿತ್ಯಾನಂದರು ಮಂತ್ರವಾದಿಯಲ್ಲಿ ಕೇಳಿಕೊಂಡರು. ಮಂತ್ರವಾದಿ ಹೌದೆಂದನು. ಮಂತ್ರವಾದಿ ತಿನ್ನಲು ಹೇಳಿದನ್ನು ನಿತ್ಯಾನಂದರು ತಿನ್ನಲು ಒಪ್ಪಿದರು.

ಮಂತ್ರವಾದಿ ತಾನು ಮಂತ್ರಿಸಿದ ತಂಬಾಕಿನ ಎಲೆಯ ಸುರುಳಿಯನ್ನು ನಿತ್ಯಾನಂದರ ಬಾಯಿಯೊಳಗಿಟ್ಟರು. ನಿತ್ಯಾನಂದರು ಒಪ್ಪಿದಂತೆ ತಂಬಾಕು ಎಲೆ ಸುರುಳಿಯನ್ನು ನಿಧಾನವಾಗಿ ಎಲೆ ಅಡಿಕೆ ತಿಂದಂತೆ ಜಿಗಿದು, ನಂತರ ಎಲ್ಲವನ್ನು ನುಂಗಿದರು. ನಿತ್ಯಾನಂದರು ಸಹಜ ಸ್ಥಿತಿಯಲ್ಲಿದ್ದರು. ವಿವಾಹದ ಪ್ರಕ್ರಿಯೆಗಳು ನಡೆದ ಬಳಿಕ ಮಂತ್ರವಾದಿಯ ಹೊಟ್ಟೆಯಲ್ಲಿ ತಡೆಯಲಾರದ ನೋವು ಕಾಣಿಸಿಕೊಂಡಿತು. ನಂತರ ನೋವಿನ ಪ್ರಮಾಣವು ಮತ್ತೂ ಹೇಚ್ಚಳ ಕಂಡಿತು. ಮಂತ್ರವಾದಿ ಮದುವೆ ಮನೆಯಿಂದ ತನ್ನ ಮನೆಗೆ ಹೋರಟು ಹೋದ. ಆದರೆ ಮಂತ್ರವಾದಿಯನ್ನು ಆಸ್ಪತ್ರೆಗೆ ಕೊಂಡೈಯ ಬೇಕಾದ ಪರಿಸ್ಥಿತಿಯು ಬಂದಿತು. ಮಂತ್ರವಾದಿ ಉದರ ವೇದನೆ ತಾಳಲಾರದೆ “ನಿತ್ಯಾನಂದರನ್ನು ಕರೆಯಿರಿ” ಎಂದು ಬೊಬ್ಬಿಡ ತೊಡಗಿದ. ಆದರೆ ಯಾವ ಕ್ಷಣದಲ್ಲಿ ನಿತ್ಯಾನಂದರು ಎಲ್ಲಿರುತ್ತಾರೆಂಬುವುದು ಊಹಿಸುವುದೇ ಕಷ್ಟ..! ಹುಡಿಕಾಡಿದರೆ ಅವರು ಸಿಕ್ಕಾರೇ..!! ಮರುದಿನ ಮುಂಜಾನೆ ಅವಧೂತರ ಪರೀಕ್ಷೆ ಒಳಪಡಿಸಿದ ಮಂತ್ರವಾದಿಯು ತಾನು ಮಾಡಿದ ದುಷ್ಕ್ರತ್ಯದ ಫಲ ಉಣ್ಣಬೇಕಾಯಿತು. ಅಂದರೆ ಮಂತ್ರವಾದಿ ಮರಣ ಹೊಂದಿದದರು. ಈ ಘಟನೆಯನ್ನು ಅವಧೂತರು ಮುಂಬೈಯ ಗಣೇಶಪುರಿಯಲ್ಲಿ ತನ್ನ ಭಕ್ತರಲ್ಲಿ ನೆನಪಿಸಿಕೊಂಡು ಹೇಳುತ್ತಿದ್ದರಂತೆ. “ಅಹಂ ಭಾವ ಯಾವತ್ತೂ ಸಲ್ಲದು..!” ಎಂದು ಅವಧೂತರ ಲೀಲೆಯಿಂದ ತಿಳಿದುಕೊಳ್ಳಬಹುದಾಗಿದೆ.

Advertisement

ತಾರಾನಾಥ್‌ ಮೇಸ್ತ ಶಿರೂರು

LEAVE A REPLY

Please enter your comment!
Please enter your name here