ಮಂಡ್ಯ ಜಿಲ್ಲೆಯಾದ್ಯಂತ ಪೋಲೀಸ್ ಕಣ್ಗಾವಲು

0
271

 
ಮಂಡ್ಯ ಪ್ರತಿನಿಧಿ ವರದಿ
ದೆಹಲಿಯಲ್ಲಿ ಇಂದು ನಡೆಯಲಿರುವ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಬಿಗಿ ಪೋಲೀಸ್ ವ್ವವಸ್ಥೆ ಮಾಡಲಾಗಿದೆ.ಇದಕ್ಕಾಗಿ ನಾಲ್ಕು ಸಾವಿರ ಪೋಲೀಸರನ್ನು ನಿಯೋಜನೆ ಮಾಡಲಾಗಿದೆ.ಸಿಆರ್ಟಿಎಫ್, ಐಟಿಬಿಎಫ್,ಪ್ಯಾರಾ ಮಿಲಿಟರಿ ಪಡೆ,ಗೃಹ ರಕ್ಷಕ ದಳದ 460 ಸಿಬ್ಬಂದಿ,ಕೇರಳ ಪೋಲೀಸರನ್ನು ನಿಯಮಿಸಲಾಗಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ಮಂಡ್ಯ ನಗರ, ಮದ್ದೂರು,ಶ್ರೀರಂಗಪಟ್ಟಣ,ಪಾಂಡವ ಪುರಗಳಲ್ಲಿ ನಿಷೇಧಾಜ್ಙೆ ಮುಂದುವರೆದಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಆದರೆ ಪ್ರಾರ್ಥಮಿಕ ಶಾಲೆಗಳಿಗೆ ರಜೆ ಘೋಷಣೆಯಾಗಿಲ್ಲ ಎಂದು ಜಿಲ್ಲಾಧಿಕಾರಿ  ಜಿಯಾವುಲ್ಲಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here