ಮಂಡಕ್ಕಿ  ಒಗ್ಗರಣೆ

0
597

ವಾರ್ತೆ ರೆಸಿಪಿ
ಬೇಕಾಗುವ   ಪದಾರ್ಥಗಳು:
ಮಂಡಕ್ಕಿ     –  ಎರಡು ಸೇರು  [  ಮಂಡಕ್ಕಿಯನ್ನು ಹತ್ತು ನಿಮಿಷ ನೀರಿನಲ್ಲಿ ನೆನಸಿಡಬೇಕು), ಈರುಳ್ಳಿ  –      ನಾಲ್ಕು   [ ಸಣ್ಣಗೆ ಹೆಚ್ಚಿಡಬೇಕು], ಹಸಿಮೆಣಸು  –  ಮೂರು   [ ಸಣ್ಣಗೆ ಹೆಚ್ಚಬೇಕು], ಹುಣಸೆ ರಸ  –  ಕಾಲು ಕಪ್ , ಸಾಸಿವೆ     –  ಅರ್ದ ಚಮಚ, ಜೀರಿಗೆ      –  ಅರ್ದ ಚಮಚ, ಶೇಂಗ ಬೀಜ  – ಸ್ವಲ್ಪ, ಖಾರ ಪುಡಿ   –  ಒಂದು ಚಮಚ, ಅರಿಶಿನ   –   ಒಂದು ಚಿಟಿಕೆ, ಸಕ್ಕರೆ    –    ಅರ್ದ ಚಮಚ, ಪುಟಾಣಿ ಪುಡಿ  –  ಅರ್ದ ಕಪ್, ಕಾಯಿ ತುರಿ-  ಸ್ವಲ್ಪ
ಉಪ್ಪು  –  ರುಚಿಗೆ, ಎಣ್ಣೆ     ಎರಡು ದೊಡ್ಡ ಚಮಚ, ಕೊತ್ತಂಬರಿ ಸೊಪ್ಪು   –  ಸ್ವಲ್ಪ [ಸಣ್ಣಗೆ ಹೆಚ್ಚಬೇಕು]
 
 
ತಯಾರಿಸುವ ವಿಧಾನ:
ಒಂದು ಬಾಣಲೆಯಲ್ಲಿ , ಎಣ್ಣೆ ಹಾಕಿ  ಬಿಸಿಯಾದ ಕೂಡಲೇ, ಸಾಸಿವೆ  ಜೀರಿಗೆ ಕರಿಬೇವು ಶೇಂಗ ಬೀಜ ಹಾಕಿ ಒಗ್ಗರಿಸಬೇಕು. ನಂತರ, ಸಣ್ಣಗೆ ಹೆಚ್ಚಿಟ್ಟ ಹಸಿಮೆಣಸು, ಈರುಳ್ಳಿ  ಹಾಕಿ  ಹುರಿಯಬೇಕು. ಕೂಡಲೇ  ಅದಕ್ಕೆ, ಅರಿಶಿನ ಪುಡಿ, ಖಾರಪುಡಿ ಸೇರಿಸಿ. ಹುಣಸೆ ರಸವನ್ನು ಹಾಕಬೇಕು.ನಂತರ ,ನೆನೆದ ಮಂಡಕ್ಕಿ  ಹಾಕಿ ಹಗುರವಾಗಿ ಮಗುಚಬೇಕು. ಈಗ ಇದಕ್ಕೆ ರುಚಿಗೆ ಸಕ್ಕರೆ ಉಪ್ಪನ್ನು  ಸೇರಿಸಬೇಕು, ಐದು  ನಿಮಿಷ ಸಣ್ಣ ಉರಿಯಲ್ಲಿ ಇಡಬೇಕು, ನಂತರ ಗ್ಯಾಸ್  ಬಂದ್  ಮಾಡಿ, ಪುಟಾಣಿ ಪುಡಿಯನ್ನು ಹಾಕಿ ನಿದಾನವಾಗಿ ಮಿಕ್ಸ್  ಮಾಡಿ, ಮೇಲಿನಿಂದ ಕಾಯಿತುರಿ, ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ಮತ್ತೆ ಮತ್ತೆ ತಿನ್ನಲು ಬೇಕನಿಸುವ ಮಂಡಕ್ಕಿ ವಗ್ಗರಣೆ ರೆಡಿ.

LEAVE A REPLY

Please enter your comment!
Please enter your name here