ಮಂಜುಶ್ರೀ ಪ್ರಿಂಟರ್ಸ್ ನಲ್ಲಿ ಆಯುಧ ಪೂಜೆ

0
229

ಉಜಿರೆ ಪ್ರತಿನಿಧಿ ವರದಿ
ಮುದ್ರಣ ವಿಭಾಗ ನಿಂತ ನೀರಾಗಬಾರದು. ಹೊಸ ಆಲೋಚನೆಗಳನ್ನು ಹೊತ್ತು ತರಬೇಕು. ಅಂತರ್ಜಾಲ, ಇ-ಪೇಪರ್ ಗಳ ಯುಗದಲ್ಲಿ ನಾವಿದ್ದು ಈಗಾಗಲೇ ಪೇಪರ್ಲೆಸ್ ತಂತ್ರಜ್ಞಾನ ಮುಂಚೂಣಿ ಸ್ಥಾನ ಪಡೆಯುತ್ತಿದೆ. ಇವೆಲ್ಲ ತೊಡಕುಗಳನ್ನು ಹೋಗಲಾಡಿಸಿ ಮುದ್ರಣ ಕ್ಷೇತ್ರವು ತನ್ನ ಸ್ಥಾನವನ್ನು ದೃಢಗೊಳಿಸಲು ಹೊಸ ಆಲೋಚನೆಯ ಕಾರ್ಯವೈಖರಿಯನ್ನು ಹೊತ್ತು ತರಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಹೇಳಿದರು.
 
 
ಉಜಿರೆಯ ಎಸ್ ಡಿ ಎಂ ಪಬ್ಲಿಕೇಶನ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುಶ್ರೀ ಪ್ರಿಂಟರ್ಸ್ ನ ಆಯುಧ ಪೂಜೆ ಸಂದರ್ಭ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
 
ಎಸ್ಡಿಎಂ ಪಬ್ಲಿಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಪ್ರೊ. ಎಸ್. ಪ್ರಭಾಕರ್, ಹಿರಿಯ ಉದ್ಯೋಗಿಗಳು ಹಾಕಿಕೊಟ್ಟ ಅಡಿಪಾಯದಲ್ಲಿ ಕಿರಿಯ ಉದ್ಯೋಗಿಗಳು ಸಂಸ್ಥೆಯನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಹೆಚ್. ಮಂಜುನಾಥ್ ಶುಭ ಹಾರೈಸಿದರು.
 
 
ಎಸ್ ಡಿ ಎಂ ಎಜುಕೇಶನಲ್ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಜೀವಂದರ್ ಕುಮಾರ್, ಮಂಜುವಾಣಿ ಸಹ ಸಂಪಾದಕ ಪ್ರೊ. ನಾ. ವುಜಿರೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಮಂಜುಶ್ರೀ ಪ್ರಿಂಟರ್ಸ್ನ ಮ್ಯಾನೇಜರ್ ಶೇಖರ್ ಟಿ. ಸ್ವಾಗತಿಸಿದರು. ವೆಂಕಪ್ಪ ವಂದಿಸಿದರು. ರವಿ ಪರಕ್ಕಜೆ ನಿರೂಪಿಸಿದರು.
 
ಸಭಾ ಕಾರ್ಯಕ್ರಮಕ್ಕೂ ಮೊದಲು ಡಿ. ಸುರೇಂದ್ರ ಕುಮಾರ್ ಪ್ರೆಸ್ ಗೆ ಖರೀದಿಸಿದ ಎರಡು ನೂತನ ಯಂತ್ರಗಳಿಗೆ ಚಾಲನೆ ನೀಡಿದರು. ಧರ್ಮಸ್ಥಳದ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ನೂತನವಾಗಿ ನಿರ್ಮಿಸಿದ ವಾಹನ ನಿಲುಗಡೆ ಶೆಡ್ ಉದ್ಘಾಟಿಸಿದರು.
ವೇದಮೂರ್ತಿ ಅನಂತರಾಮ ಕಾರಂತರ ಪೌರೋಹಿತ್ಯದಲ್ಲಿ ಗಣಪತಿ ಹೋಮ ಹಾಗೂ ಶಕ್ತಿಸ್ವರೂಪಿ ದೇವಿಯ ಪೂಜೆ ಸಹಿತ ಆಯುಧ ಪೂಜೆ ನೆರವೇರಿತು.

LEAVE A REPLY

Please enter your comment!
Please enter your name here