ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ವೈಫೈ ಸೌಲಭ್ಯ

0
301

ನಮ್ಮ ಪ್ರತಿನಿಧಿ ವರದಿ
ಡಿಜಿಟಲ್‌ ಇಂಡಿಯಾ ಪರಿಕಲ್ಪನೆಯಂತೆ ದೇಶದ ಪ್ರಮುಖ ರೈಲು ನಿಲ್ದಾಣಗಳಿಗೆ ವೈಫೈ ಸೌಲಭ್ಯ ಒದಗಿಸುವ ಪ್ರಕ್ರಿಯೆಗೆ ರೈಲ್ವೇ ಇಲಾಖೆ ಮುಂದಾಗಿದೆ. ಇದರಂತೆ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ವೈಫೈ ಸೌಲಭ್ಯ ಆರಂಭವಾಗಿದೆ.
 
 
ಕೊಯಮತ್ತೂರು, ಜೋಧ್‌ಪುರ್‌, ಹಝೀ ಪುರ್‌ ಹಾಗೂ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ವೈಫೈ ಸೌಲಭ್ಯ ಕಾರ್ಯಾರಂಭಿ ಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಸುರೇಶ್‌ ಪ್ರಭು ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
ಪ್ರಯಾಣಿಕರು ಸಂಚರಿಸುವಾಗ ಈ ರೈಲ್ವೇ ನಿಲ್ದಾಣಗಳಲ್ಲಿ ತಮಗೆ ಬೇಕಾದ ಮಾಹಿತಿ, ವೀಡಿಯೋ, ಗೇಮ್ಸ್‌ ಮುಂತಾದವುಗಳನ್ನು ವೈಫೈ ಮೂಲಕ ಡೌನ್‌ಲೋಡ್‌ ಮಾಡಬಹುದು.
 
 
ಈಗಾಗಲೇ ಮುಂಬಯಿ ಸೆಂಟ್ರಲ್‌, ಪಾಟ್ನಾ, ರಾಂಚಿ, ಎರ್ನಾಕುಲಂ ಜಂಕ್ಷನ್‌, ವಿಶಾಖಪಟ್ಟಣ, ತಿರುಪತಿ, ದಾದರ್‌, ಕಲ್ಯಾಣ್‌, ಲೋಕಮಾನ್ಯ ತಿಲಕ್‌ ಸೇರಿದಂತೆ ವೈಫೈ ಸೌಲಭ್ಯಗಳು ಈಗಾ ಗಲೇ ದೇಶದ 30 ಪ್ರಮುಖ ರೈಲು ನಿಲ್ದಾಣ ಗಳಲ್ಲಿ ಅಧಿಕೃತವಾಗಿ ಜಾರಿಗೆ ಬಂದಿವೆ.
 
 
ಮಂಗಳೂರು ಸೆಂಟ್ರಲ್‌, ಕೊಯಂಬತ್ತೂರ್‌, ಪುಣೆ, ಪುರಿ, ಚಂಢೀಗರ್‌, ಪನ್ವೇಲ್‌, ಜೋಧ್‌ಪುರ್‌, ಮಧುರೈ, ಥಾಣೆ, ತ್ರಿಶ್ಯೂರ್‌, ಬೋರಿವಿಲಿ, ಕುರ್ಲಾ, ಅಂಧೇರಿ, ಸಿಎಸ್‌ಟಿ ಸೇರಿದಂತೆ 20 ರೈಲ್ವೇ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಅಳವಡಿಸಲಾಗಿದ್ದು, ಅಧಿಕೃತ ಘೋಷಣೆ ಶೀಘ್ರದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here