ಮಂಗಲ ರಥಕ್ಕೆ ಜಿಲ್ಲೆಯಲ್ಲಿ ಅದ್ಧೂರಿಯ ಸ್ವಾಗತ

0
416

ವರದಿ: ಶ್ಯಾಮ್ ಪ್ರಸಾದ್
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಹಾಗೂ ನಾಡಿನ ಪರಮಪೂಜ್ಯ ಸಂತರ ನೇತೃತ್ವದಲ್ಲಿ ನಡೆಯುತ್ತಿರುವ ಮಂಗಲ ಗೋಯಾತ್ರೆಯು ಸೋಮವಾರ ಕಾಸರಗೋಡು ಜಿಲ್ಲೆಯನ್ನು ಪ್ರವೇಶಿಸಿತು.
 
 
 
ಜಿಲ್ಲೆಯಲ್ಲಿ ಗೋಯಾತ್ರೆಗೆ ಭವ್ಯ ಸ್ವಾಗತವನ್ನು ನೀಡಲಾಯಿತು. ಮುಳ್ಳೇರಿಯ ಹವ್ಯಕ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಗೋಪ್ರೇಮಿಗಳೊಂದಿಗೆ ಗೋವಿಗೆ ಹಾರವನ್ನು ಹಾಕಿ ಬರಮಾಡಿಕೊಂಡರು.
 
 
 
 
ಕುಂಟಾರಿನಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿಗಳು ಸ್ವಾಗತಿಸಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಗೋಯಾತ್ರಾ ಮಹಾಮಂಗಲ ಕಾರ್ಯಕ್ರಮದ ವಿವರಣೆಯನ್ನು ನೀಡಿ ಗೋಭಕ್ತರೆಲ್ಲರೂ 29ರಂದು ಮಂಗಳೂರು ಕುಳೂರು ಸಮಾವೇಶದಲ್ಲಿ ಭಾಗವಹಿಸುವಂತೆ ಕರೆನೀಡಿದರು.
ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ, ಮುಳ್ಳೇರಿಯ, ಬೋವಿಕ್ಕಾನ ಮುಂತಾದೆಡೆಗಳಲ್ಲಿ ಯಾತ್ರೆ ಸಂಚರಿಸಿತು.

LEAVE A REPLY

Please enter your comment!
Please enter your name here