ಮಂಗಲ ಗೋ ಯಾತ್ರಾ ಸಭೆ

0
489

ನಮ್ಮ ಪ್ರತಿನಿಧಿ ವರದಿ
ಭಾರತ ಮಾತೆಗಿಂತ ಗೋಮಾತೆ ಒಂದು ತೂಕ ಹೆಚ್ಚಾಗಿದ್ದು, ಭಾರತ ಮಾತೆಯ ಮಣ್ಣು ಬಂಗಾರವನ್ನು ಬೆಳೆಯಬೇಕಾದರೆ ಗೋಮೂತ್ರ ಗೋಮಯ ಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
 
mata_raichur1
 
ಸಿರಿವಾರದಲ್ಲಿ ಶ್ರೀರಾಮಚಂದ್ರಾಪುರಮಠದಿಂದ ಆಯೋಜಿತವಾದ ಮಂಗಲ ಗೋಯಾತ್ರೆಯ ಸುರಭಿ ಸಂತ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಗೋವು ಇದ್ದರೆ ನಾವು, ಇಲ್ಲದಿದ್ದರೆ ಸಾವು. ಗೋವಂಶವನ್ನು ನಾಶ ಮಾಡುವುದು ಎಂದರೆ, ನಮ್ಮ ಪ್ರಾಣವನ್ನೇ ನಾಶ ಮಾಡಿದಂತೆ. ಇಂದು ಗೋವುಗಳನ್ನು ಉಳಿಸಬೇಕು ಎಂದರೆ, ಗೋವು ಏನೇನನ್ನು ಕೊಡುತ್ತದೆಯೋ ಅವುಗಳ ಪೂರ್ಣ ಉಪಯೋಗವನ್ನು ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
 
 
 
ಗೋವಿಗೆ ನಾವು ಏನನ್ನು ಕೊಟ್ಟರೂ ಅದು ಯಜ್ಞ, ಗೋವು ನಮಗೆ ಏನು ಕೊಟ್ಟರೂ ಅದು ಅಮೃತ‌. ಸರಿಯಾಗಿ ಬ್ರೀಡಿಂಗ್ ಮಾಡಿದರೆ ದೇಸಿ ತಳಿಯೂ ಹೆಚ್ಚು ಹಾಲು ಕೊಡುತ್ತದೆ, ವ್ಯರ್ಥವಾಗುತ್ತಿರುವ ಗೋಮೂತ್ರ – ಗೋಮಯಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ರೈತರಿಗೆ ಕರೆನೀಡಿದ ಪೂಜ್ಯ ಶ್ರೀಗಳು, ರೈತರ ಜೀವನ ಗೋವಿನಿಂದ ಸಮೃದ್ಧವಾಗಲಿ ಎಂದು ಹಾರೈಸಿ, ಗೋವು ಪ್ರೀತಿಯಿಂದ ಕೊಟ್ಟಿದ್ದನ್ನು ಉಪಯೋಗಿಸಿ ನಮ್ಮ ಜೀವನವನ್ನು ಬದಲಾಯಿಸಿಕೊಳ್ಳೋಣ ಎಂಬ ಸಂದೇಶವನ್ನು ನೀಡಿದರು.
 
 
ಷ.ಬ್ರ ಶ್ರೀಸೋಮಶೇಖರ ಶಿವಾಚಾರ್ಯ ಮಾಹಾಸ್ವಾಮಿಗಳು, ನವಲಗಲ್ ಬೃಹನ್ಮಠ, ರಾಯಚೂರು ಹಾಗೂ ಮಾತೆ ನಂದೀಶ್ವರೀ, ಮಾತಾ ಮಾಣಿಕೇಶ್ವರೀ ಆಶ್ರಮ, ಲಿಂಗ್ಸೂರು ಸಭೆಯಲ್ಲಿ ಸಾನ್ನಿಧ್ಯವಹಿಸಿ ಗೋವಿನ ಕುರಿತಾಗಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿ, ಮಂಗಲ ಗೋಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
 
 
ಸಭೆಯ ನಂತರ ಶ್ರೀಸಂಸ್ಥಾನದವರು ಗೋಸಂರಕ್ಷಣೆಯ ಪ್ರತಿಜ್ಞೆಯನ್ನು ಬೋಧಿಸಿದರು, ಸಾಮಾಜಿಕ ಗಣ್ಯರು, ಗೋಪ್ರೇಮಿಗಳು ಹಾಗೂ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here