ಮಂಗಲ ಗೋಯಾತ್ರೆ – ಪೂರ್ವಸಿದ್ದತಾ ಸಭೆ

0
236

ನಮ್ಮ ಪ್ರತಿನಿಧಿ ವರದಿ
ನವೆಂಬರ್ 8 ರಿಂದ ಸಪ್ತರಾಜ್ಯಗಳಲ್ಲಿ ಸಂಚರಿಸುವ ಮಂಗಲಗೋಯಾತ್ರೆಗೆ ಸಂಬಂಧಿಸಿ ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಬೆಂಗಳೂರು, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ವಿಭಾಗದ ಪೂರ್ವಸಿದ್ಧತಾ ಸಭೆ ನಡೆಯಿತು.
 
 
 
ಸಭೆಯಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ, ಶ್ರೀಆರೂಢಭಾರತೀ ಸ್ವಾಮೀಜಿ, ಸಿದ್ಧಾರೂಡ ಮಿಶನ್, ಶ್ರೀವಿದ್ಯಾಶ್ರಮದ ಸಾಧ್ವೋಗಿನೀಮಾತಾ ಅಹಲ್ಯಾಜಿ, ಬಸವನಗರದ ಮಾತಾತೇಜಸ್ವಿನಿ, ಶ್ರೀಶ್ರೀನೀಲಕಂಠಾಚಾರ್ಯ ಸ್ವಾಮಿಜಿ, ತುಮಕೂರು, ದೊಡ್ಡಬಳ್ಳಾಪುರದ ಶ್ರೀಶ್ರೀ ಉಮೇಶ್ವರ ಸ್ವಾಮಿಜಿ ಮುಂತಾದ ಸಂತರು ಸೇರಿದಂತೆ ಈ ವಿಭಾಗದ ಸುಮಾರು 250 ಗೋಸೇವಕರು ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ರೂಪುರೇಷಗಳ ಕುರಿತು ಚರ್ಚಿಸಿದರು.
 
 
 
ಮಂಗಲ ಗೋಯಾತ್ರೆಯಲ್ಲಿ ಮಕ್ಕಳು ಹಾಗೂ ನಾಡಿನ ರೈತರಿಗೆ ಗೋವಿನ ಕುರಿತಾಗಿ ಅರಿವು ಮೂಡಿಸಲು ವಿಶೇಷ ಒತ್ತು ನೀಡಲಾಗಿದ್ದು, ನಾಡಿನ ಸಂತರ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದೆ.

LEAVE A REPLY

Please enter your comment!
Please enter your name here