ಮಂಗಲ ಗೋಯಾತ್ರೆಯ ಸುರಭಿಸಂತ ಕಾರ್ಯಕ್ರಮ

0
583

ನಮ್ಮ ಪ್ರತಿನಿಧಿ ವರದಿ
ದೇಶದಲ್ಲಿ ಕ್ಷೀರ ಕ್ರಾಂತಿಯ ಮೂಲಕ ಹಾಲಿನ‌ ರೂಪದಲ್ಲಿ ವಿಷದ ‌ಹೊಳೆ ಹರಿಯಿತು. ಮಿಶ್ರತಳಿಯ ಮೂಲವಾದ ಯುರೋಪಿಯನ್ ದೇಶಗಳೇ ಅವುಗಳ ಹಾಲನ್ನು ‘white poison’ ಎಂದು ಹೇಳುತ್ತಿವೆ.
 
 
 
ಇಂದು ರಾಷ್ಟ್ರೀಯ ಕ್ಷೀರದಿನವಾಗಿದ್ದು, ನಾವೆಲ್ಲರೂ ದೇಶೀ ಗೋವುಗಳ ಹಾಲನ್ನು ಮಾತ್ರ ಸೇವಿಸುವ ಸಂಕಲ್ಪ ಮಾಡೋಣ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
 
 
 
ಸಕಲೇಶಪುರದ ಪುರಭವನದಲ್ಲಿ ನಡೆದ ಮಂಗಲ ಗೋಯಾತ್ರೆಯ ಸುರಭಿ ಸಂತ ಸಂಗಮದಲ್ಲಿ ಗೋ ಸಂದೇಶ ನೀಡಿದ ಶ್ರೀಗಳು, ದೇಶಿ ತಳಿಗಳನ್ನು ಮಿಶ್ರ ತಳಿಗಳ ಜೊತೆಗೆ ಸಂಕರ ಮಾಡಿಸುವುದು ಮೂರ್ಖತನ. ಇದರಿಂದ ವಿಷ ನಮ್ಮ ಹೊಟ್ಡೆ ಸೇರುತ್ತದೆ ಮತ್ತು‌ ಪ್ರಮುಖವಾಗಿ ಭಾರತೀಯ ಮೂಲ ತಳಿಗಳು ನಾಶವಾಗುತ್ತದೆ. ಹೆಚ್ಚಿಗೆ ಹಾಲು‌ ‌ಕೊಡುತ್ತದೆ, ಸಂಕರ ಮಾಡಿಸಿ ಎಂದು ಸರಕಾರವೇ ಉತ್ತೇಜನ ನೀಡುತ್ತಿರುವುದು ಆತಂಕಕಾರಿ ಎಂದರು.
 
 
 
ಇಂದು ಸಂವಿಧಾನ ದಿನವೂ ಆಗಿದ್ದು, ಭಾರತ ಸಂವಿಧಾನದ ರಾಜನೀತಿಯ ಮಾರ್ಗದರ್ಶಿ ಸೂತ್ರದ ೪೮ ನೇ ಪರಿಚ್ಛೇದದಲ್ಲಿ ಗೋಸಂರಕ್ಷಿಸುವಂತೆ ಸೂಚಿಸಲಾಗಿದೆ. ಸಂವಿಧಾನವನ್ನು ಅಂಗೀಕರಿಸಿರುವ ನಾವು, ಸಂವಿಧಾನದಲ್ಲಿ ಇರುವುದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
 
 
 
ವಿಳಂಬ – ಉತ್ತಮ ಸ್ಪಂದನೆ
ಮಂಗಲ ಗೋಯಾತ್ರೆ ಆರಂಭವಾಗಿ ಹಲವು ದಿನಗಳಾಗಿದ್ದರು, ಇಲ್ಲಿಯ ವರೆಗೂ ಸಭೆಯ ಸಮಯದಲ್ಲಿ ವಿಳಂಬವಾಗಿರಲಿಲ್ಲ, ಆದರೆ ಇಂದು ಸ್ವಲ್ಪ ವಿಳಂಬವಾಗಿ ಸಭೆ ಆರಂಭವಾಗುತ್ತಿದೆ. ಗೋವಿನ ಕುರಿತಾಗಿ ವ್ಯಕ್ತವಾಗುತ್ತಿರುವ ಉತ್ತಮ ಪ್ರತಿಸ್ಪಂದನೆಯೇ ಈ ವಿಳಂಬಕ್ಕೆ ಕಾರಣವಾಗಿದ್ದು, ಇಂದು ಮಧ್ಯಾಹ್ನ ಅರಕಲುಗೂಡಿನಲ್ಲಿ ನಡೆದ ಗೋಪರಿವಾರದ ಚಿಂತನ ಮಂಥನ ಸಭೆಯ ಫಲವಾಗಿ ಆ ಭಾಗದ ನಿಂತು ಹೋಗಿದ್ದ ಒಂದು ಗೋಶಾಲೆ ಪುನರಾರಂಭವಾದರೆ, ಇನ್ನೊಂದು ಗೋಶಾಲೆಗೆ ಅಡಿಗಲ್ಲು ಹಾಕಲಾಯಿತು. ಪೂರ್ವನಿಗದಿತವಲ್ಲದ ಎರಡು ಗೋಶಾಲೆಗಳಿಗೆ ಚಾಲನೆ ನೀಡಿ ಬಂದಿದ್ದರಿಂದ ಸಭೆ ವಿಳಂಬವಾಗಿ ಆರಂಭವಾದರೂ, ಮಂಗಲ ಗೋಯಾತ್ರೆಯ ಪರಿಣಾಮ ಕಾಣಸಿಗುತ್ತಿರುವುದು ಸಂತಸದ ವಿಚಾರ ಎಂದರು.
 
 
ವಿಶ್ವಕರ್ಮ ಸಂಸ್ಥಾನದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮಿಜಿಗಳು ಮಾತನಾಡಿ, ಗೋಮಾತೆಯು ಅನುಭವಿಸುತ್ತಿರುವ ನೋವನ್ನು ನೋಡಿದಾಗ, ಅವುಗಳನ್ನು ರಕ್ಷಿಸುವ ಕುರಿತು ಆಲೋಚನೆ ಮಾಡಬೇಕಿದೆ. ಗೋವಿಗಾಗಿಯೇ ಜೀವನ ಮುಡಿಪಾಗಿಟ್ಟು ,‌ ಗೋವಿನ ‌ರಕ್ಷಣೆಗಾಗಿ ಶ್ರಮಿಸುತ್ತಿರುವ ಸಂತರು ಯಾರಾದರೂ ಇದ್ದರೆ ಅದು ಶ್ರೀ ರಾಘವೇಶ್ವರಭಾರತಿ ಸ್ವಾಮೀಜಿಯವರು ಮಾತ್ರ, ನಾವೆಲ್ಲರೂ ಅವರ ಜೊತೆ ಕೈಜೋಡಿಸೋಣ ಎಂದರು.
 
 
ಸಕಲೇಶಪುರದ ಪಶುವೈದ್ಯರಾದ ಡಾ. ಬಾದಾಮಿ ಅವರು ಪ್ರಾಸ್ತಾವಿಕ ಮಾತನಾಡಿ ಗೋವಿನ ಕುರಿತು ಅರಿವು ಮೂಡಿಸಿದರು. ಸಕಲೇಶಪುರದ ಪ್ರಮುಖ ಮಾರ್ಗಗಳಲ್ಲಿ ಮಂಗಲ ಗೋಯಾತ್ರೆಯ ಭವ್ಯ ಶೋಭಾಯಾತ್ರೆ ಸಂಚರಿಸಿ ಗೋಜಾಗೃತಿ ಮೂಡಿಸಿತು.

LEAVE A REPLY

Please enter your comment!
Please enter your name here