ಮಂಗಲ ಆವಾಹನಾಯಾತ್ರೆ

0
176

ಮಂಗಳೂರು ಪ್ರತಿನಿಧಿ ವರದಿ
ಶ್ರೀರಾಮಚಂದ್ರಾಪುರಮಠದ ಆಯೋಜನೆಯಲ್ಲಿ ನೆಡೆಯುತ್ತಿರುವ ಮಂಗಲಗೋಯಾತ್ರೆಯ ಮಹಾಮಂಗಲಕ್ಕೆ ಪೂರ್ವಭಾವಿಯಾಗಿರುವ ಮಂಗಲ ಆವಾಹನಾಯಾತ್ರೆಯ ದಶರಥಗಳು ಇಂದು ಸಂಚಾರ ನೆಡೆಸಿದವು.
 
 
 
ಇಂದು ಗುರುವಾಯನಕೆರೆಯಿಂದ ಹೊರಟ ದಶರಥಗಳಿಗೆ ಉಜಿರೆ ಜನಾರ್ಧನ ದೇವಸ್ಥಾನ, ಉಜಿರೆ ರಾಮಮಂದಿರ, ಧರ್ಮಸ್ಥಳ ದೇವಳ, ಸಂತೋಷ ನಗರ, ಕೊಕ್ಕಡ, ಸೌತಡ್ಕ ಮಹಾಗಣಪತಿ ದೇವಳ, ಬಿಳಿಮಲೆ ಗೋಪಾಲಕೃಷ್ಣ ದೇವಸ್ಥಾನಗಳಲ್ಲಿ ಸ್ವಾಗತ ಕೋರಿ ಗೋಮಾತೆಗೆ ಪೂಜೆ ಸಲ್ಲಿಸಲಾಯಿತು.
 
 
 
ಧರ್ಮಸ್ಥಳ ದೇವಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗಡೆ ಹಾಗೂ ಕುಟುಂಬದವರು ದೇವಾಲಯದ ಮುಂಭಾಗದಲ್ಲಿ ಗೋಮಾತೆಗೆ ನಮನ ಸಲ್ಲಿಸಿದರೆ, ಸೌತಡ್ಕ ದೇವಳದಲ್ಲಿ ಗೋಯಾತ್ರೆಯ ಯಶಸ್ಸಿನ ಸಲುವಾಗಿ ರಂಗಪೂಜೆಯನ್ನು ವಿಘ್ನವಿನಾಶಕನ ಸ್ಮರಣೆಯ ಮುಖೇನ ನೆರವೇರಿಸಲಾಯಿತು.
 
 
 
ನಂತರ ನೆಡೆದ ಗೋಜಾಗೃತಿ ಸಭೆಯಲ್ಲಿ ಗೋಸೇವಕರಾದ ಆಢ ಪ್ರಕಾಶ್ ಟೇಲರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಮರ್ಧಾಳದಲ್ಲಿ ಗೋಜಾಗೃತಿ ಸಭೆ ವಿಶೇಷ ಯಶಸ್ಸು ಸಾಧಿಸಿತು. ಅನೇಕ ಗಣ್ಯ ಮಾನ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here