ಭ್ರೂಣ ಹತ್ಯೆ ಆರೋಪ!

0
360

ಬೆಂಗಳೂರು ಪ್ರತಿನಿಧಿ ವರದಿ
ಸಿ.ಎಂ. ಇಬ್ರಾಹಿಂ ಕುಟುಂಬದ ವಿರುದ್ಧ ಭ್ರೂಣ ಹತ್ಯೆ ಆರೋಪ ದಾಖಲಾಗಿದೆ. ಸೋದರ ಸಿ.ಎಂ. ಖಾದರ್ ನಿಂದಲೇ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ವಿರುದ್ಧ ಭ್ರೂಣ ಹತ್ಯೆ ಆರೋಪ ದಾಖಲಾಗಿದೆ.
 
 
 
ಇದರಿಂದ ಇಬ್ರಾಹಿಂ ವಿರುದ್ದ ಖಾದರ್ ದೂರು ನೀಡಲು ನಿರ್ಧರಿಸಿದ್ದಾರೆ. 7 ತಿಂಗಳ ಹಿಂದೆ ಸಿ.ಎಂ. ಇಬ್ರಾಹಿಂ ಪುತ್ರಿ ವಿವಾಹ ತನ್ನ ಸೋದರ ಸಿ.ಎಂ. ಖಾದರ್ ಪುತ್ರ ನಡೆದಿತ್ತು. ಸಿ.ಎಂ.ಫೈಸಲ್ ಹಾಗೂ ಸಿ.ಎಂ.ಇಫಾ ಪ್ರೀತಿಸಿ ಮದುವೆಯಾಗಿದ್ದರು. ಹಣ್ಣಿನ ಜ್ಯೂಸ್ ನಲ್ಲಿ ಗರ್ಭಪಾತದ ಮಾತ್ರೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
 
 
ಇಬ್ರಾಹಿಂ ಪುತ್ರಿ ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದರು. ಇಫಾಳನ್ನು ತವರು ಮನೆಗೆ ಬಿಡಲು ಬಂದಿದ್ದ ವೇಳೆ ಇಫಾಳ ಪತಿ ಫೈಸಲ್ ಮೇಲೆ ಹಲ್ಲೇ ಕೂಡ ನಡೆದಿತ್ತು. ಇಬ್ರಾಹಿಂ ಪುತ್ರ ಮಹಮ್ಮದ್ ಫೈಯಾಜ್ ಹಲ್ಲೆ ನಡೆಸಿದ್ದ. ಬಳಿಕ ಇಫಾಳನ್ನು ಗೃಹಬಂಧನಲ್ಲಿರಿಸಲಾಗುತ್ತು. ನಿನ್ನೆ ಮುಂಜಾನೆ ಇಫಾಗೆ ಅವಳ ತಾಯಿ ಹಣ್ಣಿನ ಜ್ಯೂಸ್ ನೀಡಿದ್ದಾರೆ. ಈ ವೇಳೆ ಗರ್ಭಪಾತ ಮಾತ್ರೆ ನುಂಗಿಸಿದ್ದಾರೆ. ನಿನ್ನೆ ಸಂಜೆ ಪುತ್ರಿ ಇಫಾಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ, ಪತಿ ಕುಟುಂಬಕ್ಕೆ ಮಾಹಿತಿ ನೀಡದೇ ಗರ್ಭಪಾತ ಮಾಡಿಸಿದ್ದಾರೆ ಎಂದು ಇಫಾಳ ಪತಿಯ ಮನೆಯವರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here