ಭ್ರಷ್ಟರ ಬೆನ್ನುಹಿಡಿದ ಎಸಿಬಿ

0
181

ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯಾದ್ಯಂತ ಇಂದು ಬೆಳ್ಳಂಬೆಳಗೆ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. 6 ಜಿಲ್ಲೆಗಳ 12 ಪ್ರತ್ಯೇಕ ಸ್ಥಳಗಳಲ್ಲಿ ಎಸಿಬಿ ತಂಡ ಕಾರ್ಯಾಚರಣೆ ನಡೆಸಿದೆ.
 
 
7 ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿ ಶಾಕ್ ನೀಡಿದೆ. ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಚಾಮರಾಜನಗರ, ಮಂಗಳೂರು(ದ.ಕ.) ಸೇರಿದಂತೆ ಹಲವೆಡೆ ಎಸಿಬಿ ದಾಳಿ ನಡೆದಿದೆ.
 
 
ಬೆಂಗಳೂರಿನಲ್ಲಿ ಬಿಬಿಎಂಪಿಉ ನಗರ ಯೋಜನೆ ಸಹಾಯಕ ನಿರ್ದೇಶಕ ಬಸವರಾಜು ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆದಿದೆ.  ನೀರಾವರಿ ಉಪವಿಭಾಗ ಎಇ ಪುಟ್ಟರಾಜು ಮನೆ ಮೇಲ ದಾಳಿ ನಡೆದಿದೆ.
 
 
ಕೆಆರ್ ಐಡಿಎಲ್ ಎಇಇ ಉಮೇಶ್ ಅವರ ದಾವಣಗೆರೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿದೆ.
 
 
ಬಳ್ಳಾರಿ ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲ ಡಾ.ಪಿ ಪಂಪಾವತಿ ನಿವಾಸದ ಮೇಲೆ ದಾಳಿ ನಡೆದಿದೆ.
 
ಚಿತ್ರದುರ್ಗದಲ್ಲೂ ಎಸಿಬಿ ದಾಳಿ ನಡೆದಿದ್ದು, ಮೊಳಕಾಲ್ಮೂರು ಪಿಡಬ್ಲ್ಯೂಡಿ ಇಲಾಖೆ ಎಇ ಪುಟ್ಟಲಿಂಗಯ್ಯನ ತರಳಬಾಳು ನಗರದ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ. ಎಸಿಬಿ ಡಿವೈಎಸ್ ಪಿ ಜಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ.
 
 
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯಿನಕೆರೆಯಲ್ಲಿ ಎಸಿಬಿ ದಾಳಿ ನಡೆದಿದ್ದು, ಬೆಳ್ತಂಗಡಿ ತಾ. ಕಚೇರಿಯ ಸೂಪರ್ ಡೆಂಟ್ ಗೊವಿಂದ ನಾಯಕ್ ಮನೆ ಮೇಲೆ ದಾಳಿ ನಡೆದಿದೆ.
 
 
ಚಾಮರಾಜನಗರದಲ್ಲೂ ಎಸಿಬಿ ದಾಳಿ ನಡೆಸಿದ್ದು, ಉಪ್ಪಾರ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ರೇಚಣ್ಣನ ಭ್ರಮರಾಂಭ ಬಡಾವಣೆಯಲ್ಲಿರುವ ಮನೆ ಹಾಗೂ ಹಂಡ್ರಕಳ್ಳಿಯಲ್ಲಿರುವ ನಿವಾಸದ ಮೇಲೂ ದಾಳಿ ನಡೆದಿದೆ. ಅಲ್ಲದೆ ಆಲೂರಿನಲ್ಲಿರುವ ರೇಚಣ್ಣ ಮಾನವ ಮನೆ ಮೇಲೂ ದಾಳಿ ನಡೆದಿದೆ. ಮೂರು ಮನೆಗಳ ಮೇಲೆ ಏಕಕಾಲದಲ್ಲಿ ಎಸಿಬಿ ದಾಳಿ ನಡೆದಿದೆ. ರೇಚಣ್ಣ ವೃತ್ತಿ ಜೊತೆ ಬಡ್ಡಿ ವ್ಯವಹಾರ ಮಾಡುತ್ತಿದ್ದ ಎನ್ನಲಾಗಿದೆ. ಎಸಿಬಿ ಡಿವೈಎಸ್ ಪಿ ಪ್ರಭಾಕರ್ ರಾವ್ ಶಿಂಧೆ ನೇತೃತ್ವದಲ್ಲಿ ದಾಳಿ ನಡೆದಿದೆ.
 
 
ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಕೈಗೆ ಸಿಕ್ಕ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ದಾಳಿಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು ವಶಕ್ಕೆ ಪಡೆಯಲಾಗಿದೆ.

LEAVE A REPLY

Please enter your comment!
Please enter your name here