ಭೇಷ್…ಜವನೆರ್ ಬೆದ್ರ

0
10235


ಮೂಡುಬಿದಿರೆ: ಜನವನೆರ್ ಬೆದ್ರ ಸಂಘಟನೆ ಒಂದಿಲ್ಲೊ0ದು ಸಮಾಜಮುಖೀ ಕಾರ್ಯಗಳನ್ನು ನಿರಂತರ ಮಾಡುತ್ತಾ ಬಂದಿದೆ. ಇದೀಗ ಕೋವಿಡ್ ವಾರಿಯರ್ ಆಗಿಯೂ ಸಂಘಟನೆಯ ಸದಸ್ಯರು ಕಾರ್ಯನಿರ್ವಹಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಕೊರೊನಾ ಸೋಂಕಿತರನ್ನು ಕಂಡರೆ ಹೆದರುವ, ಕೊರೊನಾ ಸೋಂಕಿನಿ0ದ ಮೃತಪಟ್ಟವರನ್ನು ಗೌರವಯುತವಾಗಿ ಸಂಸ್ಕಾರ ಮಾಡದೆ ಇರುವ ಸನ್ನಿವೇಶಗಳು ಸಮಾಜದಲ್ಲಿ ನಡೆಯುತ್ತಿದೆ. ಆದರೆ ಈ ತಂಡದ ಸದಸ್ಯರು ಇದು ನಮ್ಮ ಕರ್ತವ್ಯ ಎಂದು ನಂಬಿ ಅತ್ಯಂತ ಶ್ರದ್ಧೆಯಿಂದ ಸಂಸ್ಕಾರಯುತವಾಗಿ ಅಂತ್ಯ ಸಂಸ್ಕಾರ ಕ್ರಿಯೆಯನ್ನು ನಡೆಸುತ್ತಿದ್ದಾರೆ. ಸೋಮವಾರ ಕೋವಿಡ್ ಕಾರಣದಿಂದ ಮೃತಪಟ್ಟ ಪೆರಿಂಜೆಯ ವ್ಯಕ್ತಿಯೋರ್ವರ ಅಂತ್ಯಸ0ಸ್ಕಾರವನ್ನು ಮೂಡುಬಿದಿರೆಯ ಜ್ಯೋತಿನಗರದ ಹಿಂದೂ ರುದ್ರಭೂಮಿಯಲ್ಲಿ ಮಾಡಲಾಯಿತು. ಮೃತವ್ಯಕ್ತಿಯ ಮಗ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಜವನೆರ್ ಬೆದ್ರ ಸಂಘಟನೆಯ ಸದಸ್ಯರು ಈ ಅಂತ್ಯಸ0ಸ್ಕಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಾದರಿಯಾದರು.


LEAVE A REPLY

Please enter your comment!
Please enter your name here