ಭೀಕರ ಸರಣಿ ಅಪಘಾತ

0
312

ಚಿತ್ರದುರ್ಗ ಪ್ರತಿನಿಧಿ ವರದಿ
ರಾಂಪುರದಲ್ಲಿ ಸರಣಿ ಅಪಘಾತ ಸಂಭವಿಸಿದೆ. ಲಾರಿಯೊಂದು ಆಟೋಗೆ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ 11 ಮಂದಿ ಸಾವನ್ನಪ್ಪಿದ್ದ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಬಳಿ ನಡೆದಿದೆ.
 
chitradura_sarani_acci
ಲಾರಿಯ ಟಯರ್ ಸ್ಫೋಟಗೊಂಡ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಲಾರಿ ಮೊದಲು ಟೆಂಪೋ ಟ್ರಾವೆಲರ್ ಗೆ ಡಿಕ್ಕಿಯಾಗಿ ಬಳಿಕ ಎರಡು ಆಟೋಗಳಿಗೆ ಡಿಕ್ಕಿಯಾಗಿದೆ. ಲಾರಿ ಡಿಕ್ಕಿಯಾದ ಪರಿಣಾಮ ಎರಡು ಆಟೋದಲ್ಲಿದ್ದ 3 ಬಾಲಕಿಯರು, 3 ಮಹಿಳೆಯರು ಹಾಗೂ ಐವರು ಪುರುಷರು ಸೇರಿ 11 ಮಂದಿ ಸಾವನ್ನಪ್ಪಿದ್ದಾರೆ.
 
 
 
ಘಟನೆಯಲ್ಲಿ 15 ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಟೆಂಪೊ ಟ್ರಾವೆಲರ್ ಬೆಂಗಳೂರಿನಿಂದ ಯಾದಗಿರಿ ಜಿಲ್ಲೆ ಶಹಾಪುರಗೆ ತೆರಳುತ್ತಿತ್ತು. 2 ಆಟೋಗಳು ನಾಗಸಮುದ್ರದಿಂದ ರಾಂಪುರಕ್ಕೆ ತೆರಳುತ್ತಿತ್ತು.

LEAVE A REPLY

Please enter your comment!
Please enter your name here