ಪ್ರಮುಖ ಸುದ್ದಿರಾಜ್ಯವಾರ್ತೆ

ಭೀಕರ ರಸ್ತೆ ಅಪಘಾತ:ಒಂದೇ ಕುಟುಂಬದ ಮೂವರ ಬಲಿ

ಮೈಸೂರು ಪ್ರತಿನಿಧಿ ವರದಿ
ಬೈಕ್ ಗೆ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಬೈಕ್ ನಲ್ಲಿದ್ದ ದಂಪತಿ, ಪುತ್ರಿ ದುರ್ಮರಣ ಹೊಂದಿದ್ದ ಘಟನೆ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಬೋಚಿಕಟ್ಟೆ ಗ್ರಾಮದ ಬಳಿ ಸಂಭವಿಸಿದೆ.
 
 
ಮೃತರನ್ನು ಶ್ರೀನಿವಾಸ(35), ಉಮಾ(30), ಚೈತ್ರಾ(9) ಎಂದು ಗುರುತಿಸಲಾಗಿದೆ. ಮೃತರೆಲ್ಲಾ ಹೆಚ್ ಡಿ ಕೋಟೆ ತಾಲೂಕಿನ ನಂಜನಾಯಕನಹಳ್ಳಿ ನಿವಾಸಿಗಳಾಗಿದ್ದಾರೆ.
 
 
ಘಟನೆ ಬಳಿಕ ಟ್ಯಾಂಕರ್ ಚಾಲಕ ಟ್ಯಾಂಕರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಟ್ಯಾಂಕರ್ ಮಾಲೀಕನ ಮೇಲೆ ಸ್ಥಳೀಯ ನಿವಾಸಿಗಳಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಹೆಚ್ ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here