ಭೀಕರ ಬೈಕ್ ಅಪಘಾತ

0
562

ಚಿಕ್ಕಬಳ್ಳಾಪುರ ಪ್ರತಿನಿಧಿ ವರದಿ
ಲಾರಿ-ಬೈಕ್ ಮುಖಾಮುಖಿಯಾದ ಡಿಕ್ಕಿಯಾಗಿ ಬೈಕ್ ಗೆ ಬೆಂಕಿ ಹೊತ್ತಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೇ ಬಾವಿ ಸಮೀಪ ಸಂಭವಿಸಿದೆ.
 
 
 
ಘಟನೆಯಲ್ಲಿ ರೇಲ್ವೆ ಉದ್ಯೋಗಿ ಸಜೀವದಹನವಾಗಿದ್ದು, ಪುತ್ರನಿಗೆ ಗಂಭೀರ ಗಾಯಗಳಾಗಿವೆ. ವೇಗವಾಗಿ ಚಲಿಸುತ್ತಿದ್ದ ಲಾರಿಗೆ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ನಂತರ ಬೈಕ್, ಲಾರಿಯ ಕೆಳಭಾಗಕ್ಕೆ ನುಗ್ಗಿದೆ. ಬೈಕ್ ನ್ನು ಲಾರಿ ಸುಮಾರು 100 ಮೀ. ವರೆಗೆ ಎಳೆದೊಯ್ದಿದೆ. ಈ ವೇಳೆ ಸ್ಟಾರ್ಕ್ ಆಗಿ ಬೈಕ್ ಗೆ ಬೆಂಕಿ ಹೊತ್ತಿಕೊಂಡಿತ್ತು. ಬೈಕ್ ನಲ್ಲಿ ರೇಲ್ವೆ ಉದ್ಯೋಗಿ ಕೃಷ್ಣೇಗೌಡ(59) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
 
 
 
ಡಿಕ್ಕಿಗೂ ಮೊದಲೇ ಪುತ್ರ ನಾಗೇಶ್ ಬೈಕ್ ನಿಂದ ಹಾರಿದ್ದರು. ಇದರಿಂದ ತಂದೆ ಕೃಷ್ಣೇಗೌಡ ಸಜೀವ ದಹನವಾಗಿದ್ದು, ಪುತ್ರ ನಾಗೇಶ ಪಾರಾಗಿದ್ದಾರೆ. ಅಪಘಾತದಲ್ಲಿ ಬೈಕ್ ಮತ್ತು ಲಾರಿ ಸುಟ್ಟು ಕರಕಲಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here