ಭೀಕರ ಪಟಾಕಿ ಸ್ಫೋಟ: ಐವರ ಬಂಧನ

0
361

 
ರಾಷ್ಟ್ರೀಯ ಪ್ರತಿನಿಧಿ ವರದಿ
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಭೀಕರ ಅಗ್ನಿ ದುರಂತ ಪ್ರಕರಣ ಸಂಬಂಧ ಕೇರಳ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಕ್ರೈಂ ಬಾಂಬ್ ಪೊಲೀಸರು ಭದ್ರಕಾಳಿ ದೇಗುಲಕ್ಕೆ ಪಟಾಕಿ ತಂದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಐವರು ಆರೋಪಿಗಳು ಸಿಡುಮದ್ದು ಪ್ರದರ್ಶನ ಆಯೋಜನೆಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ಪೊಲೀಸರು ನಿನ್ನೆ ಹಲವರ ವಿರುದ್ಧ ಪ್ರಕರಣದ ದಾಖಲಿಸಿದ್ದು, ದುರಂತ ಸಂಬಂಧ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
 
ಘಟನೆ ವಿವರ…
ನಿನ್ನೆ ಕೇರಳದ ಕೊಲಂನ ಪಾರವೂರ್ ನಲ್ಲಿರುವ ಪುತ್ತಿಂಗಲ್ ದೇಗುಲದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪಟಾಕಿಯಿಂದ ಅಗ್ನಿ ದುರಂತ ಸಂಭವಿಸಿತ್ತು. ಪಟಾಕಿ ಸ್ಫೋಟಿಸಿ 110ಕ್ಕೂ ಹೆಚ್ಚು ಮಂದಿ ಜನರು ಸಾವನ್ನಪ್ಪಿದ್ದು, 380ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡವರ ಪೈಕಿ ಈಗಲೂ 45 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪ್ರತೀ ಬಾರಿಯಂತೆ ಈ ಬಾರಿಯೂ ದೇಗುಲದಲ್ಲಿ ಬಾಣಬಿರುಸುಗಳ ಪ್ರದರ್ಶನದ ನಡೆಸಲಾಗಿತ್ತು. ಆದರೆ, ಆಕಾಶದಲ್ಲಿ ಹಾರುವ ಬದಲು ಪಟಾಕಿಗಳು ನೆಲದಲ್ಲೇ ಸಿಡಿದ ಪರಿಣಾಮ ದುರ್ಘಟನೆಯೊಂದು ಸಂಭವಿಸಿದೆ.
 
ರಾಜ್ಯದ ಸಹಾಯಹಸ್ತ
ಕೇರಳ ರಾಜ್ಯದ ಮೂಕಾಂಬಿಕ ದೇಗುಲದಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರ ನೆರವಿನ ಹಸ್ತ ಚಾಚಿದ್ದು, ಅಗತ್ಯ ಔಷಧಗಳೊಂದಿಗೆ 10 ವೈದ್ಯರ ತಂಡವನ್ನು ಕೇರಳಕ್ಕೆ ಕಳುಹಿಸಲು ತೀರ್ಮಾನಿಸಿದೆ.
ಅಲ್ಲದೆ ಅಗತ್ಯ ಔಷಧಿಗಳೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಡಾ. ಸ್ಮಿತಾ ನೇತೃತ್ವದಲ್ಲಿ 10 ವೈದ್ಯರ ತಂಡ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಯ ತಂಡವನ್ನು ಕೇರಳಕ್ಕೆ ರವಾನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಮಾಹಿತಿ ನೀಡಿದ್ದಾರೆ.
 
ಪ್ರಧಾನಿ ಭೇಟಿ
ಭೀಕರ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೇರಳಕ್ಕೆ ಭೇಟಿ ನೀಡಿದ್ದರು.ಪ್ರಧಾನಿ ಸುದ್ದಿ ತಿಳಿಯುತ್ತಿದ್ದಂತೆ ಸಂತಾಪ ಸೂಚಿಸಿ ಪರಿಹಾರ ಘೋಷಣೆ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇರಳ ರಾಜ್ಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದು, ಇದರಂತೆ ಭಾನುವಾರ ಬೆಳಿಗ್ಗೆ ವಿಶೇಷ ವಾಯುಸೇನಾ ವಿಮಾನದ ಮೂಲಕ ಕೇರಳಗೆ ಪ್ರಯಾಣ ಬೆಳೆಸಿದ್ದರು. ಮೋದಿಯವರೊಂದಿಗೆ 15 ವೈದ್ಯರ ತಂಡ ಕೂಡ ಪ್ರಯಾಣ ಬೆಳೆಸಿತ್ತು.

LEAVE A REPLY

Please enter your comment!
Please enter your name here