ಭೀಕರ ದುರಂತ

0
258

ಚಿಕ್ಕಬಳ್ಳಾಪುರ ಪ್ರತಿನಿಧಿ ವರದಿ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಬಳಿ ಭಾರೀ ಅಗ್ನಿ ದುರಂತ ಸಂಭವಿಸಿದೆ. ಗೋಡಾನ್ ನ ಬಳಿ ನಿಲ್ಲಿಸಲಾದ ಗ್ಯಾಸ್ ಸಿಲಿಂಡರ್ ಗಳು ತುಂಬಿದ ಲಾರಿಗಳಿಗೆ ಬೆಂಕಿ ತಗುಲಿದ ಪರಿಣಾಮ ಲಾರಿಯಲ್ಲಿದ್ದ ಸುಮಾರು 900ಕ್ಕೂ ಹೆಚ್ಚು ಅಡುಗೆ ಸಿಲಿಂಡರ್‌ಗಳು ಸ್ಫೋಟಗೊಂಡಿವೆ.
 
 
 
ಸ್ಫೋಟದ ರಭಸಕ್ಕೆ 2 ಲಾರಿಗಳು ಮತ್ತು ಬಳಿಯಿದ್ದ ಬೊಲೆರೊ ವಾಹನ ಧಗಧಗನೆ ಹೊತ್ತಿ ಉರಿದು, ಸಂಪೂರ್ಣ ಭಸ್ಮವಾಗಿದೆ. ಪಟಾಕಿಗಳಂತೆ ಸುಮಾರು 2 ಗಂಟೆಗಳ ಕಾಲ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಸುಮಾರು 10 ಕಿ.ಮೀ.ನಷ್ಟು ಸ್ಫೋಟದ ಶಬ್ಧ ಕೇಳಿ ಬಂದಿದೆ. ಸಿಲಿಂಡರ್ ಸ್ಫೋಟದ ಶಬ್ದ ಕೇಳಿ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
 
 
 
ಗೋದಾಮಿನಲ್ಲೂ ನೂರಾರು ಸಿಲಿಂಡರ್ ಗಳನ್ನು ಸಂಗ್ರಹಿಸಲಾಗಿತ್ತು. ಲಾರಿಗೆ ಬೆಂಕಿ ಕೆನ್ನಾಲೆ ಗೋದಾಮಿಗೂ ವ್ಯಾಪಿಸಿದ್ದೆ ಭಾರೀ ಅನಾಹುತವಾಗುತ್ತಿತ್ತು ಎನ್ನಲಾಗಿದೆ. ಚಿಂತಾಮಣಿಯಲ್ಲಿ ಅದೃಷ್ಟಶಾತ್ ಭಾರೀ ಅನಾಹುತ ತಪ್ಪಿದೆ. ಅಲ್ಲದೆ ಘಟನೆ ನಡೆದ ಸಮೀಪವೇ ವಿವೇಕ ವಿದ್ಯಾಶಾಲೆಯೂ ಇತ್ತು. ಕ್ರಿಸ್ ಮಸ್ ಹಬ್ಬ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ರೆಸಿಡೆನ್ಸಿಯಲ್ ಶಾಲೆಯಲ್ಲಿ ಕೆಲ ಮಕ್ಕಳು, ಸಿಬ್ಬಂದಿ ಇದ್ದರು. ಘಟನೆ ನಡೆದ ಕೂಡಲೇ ಮಕ್ಕಳ ಸ್ಥಳಾಂತರ ಮಾಡಲಾಗಿತ್ತು. ಅಗ್ನಿ ಅನಾಹುತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 6 ಅಗ್ನಿಶಾಮಕ ದಳ ವಾಹನಗಳ ಸಿಬ್ಬಂದಿಗಳು ಬೆಂಕಿನಂದಿಸಿದ್ದಾರೆ.ಚಿಂತಾಮಣಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 
 
 
ಮಾಹಿತಿ ಪಡೆಯದೆ ಹಾಗೆ ತೆರಳಿದ ಎಸ್ ಪಿ
ಚಿಂತಾಮಣಿ ಹೊರವಲಯದಲ್ಲಿ ಅಗ್ನಿ ಅನಾಹುತ ಪ್ರಕರಣದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ ಪಿ ಎಂ ಚೈತ್ರಾ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಆದ್ರೆ ಎಸ್ ಪಿ ಘಟನೆ ಬಗ್ಗೆ ಮಾಹಿತಿ ಪಡೆಯಲಿಲ್ಲ ಎಂದು ಆರೋಪಿಸಲಾಗಿದೆ. ಘಟನಾ ಸ್ಥಳಕ್ಕೆ ಬಂದು 2 ನಿಮಿಷದಲ್ಲೇ ವಾಪಸಾಗಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here