ಭೀಕರ ದುರಂತ

0
226

ಮೈಸೂರು ಪ್ರತಿನಿಧಿ ವರದಿ
ಲಾರಿ ಮತ್ತು ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಐವರು ದುರ್ಮರಣ ಹೊಂದಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮಧುಗಿರಿಕೊಪ್ಪಲು ಸಮೀಪ ನಡೆದಿದೆ. ಬಸ್ ಚಾಲಕ, ಲಾರಿ ಚಾಲಕ ಸೇರಿ 5 ಜನರು ಸಾವನನ್ನಪ್ಪಿದ್ದಾರೆ.
 
 
ಬಸ್ ಚಾಲಕ ಕೆ ಆರ್ ನಗರದ ಸದಾಶಿವ(45) ದುರ್ಮರಣ ಹೊಂದಿದ್ದು, ಬಸ್ ನಿರ್ವಾಹಕ ದೇವರಾಜ್ ಸೇರಿ 10 ಜನರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 
 
 
ಅಪಘಾತವಾದ ಲಾರಿ ಮೈಸೂರಿನಿಂದ ಹುಣಸೂರಿನತ್ತ ಅಕ್ಕಿ ಸಾಗಿಸುತ್ತಿದ್ದು, ಬಸ್ ವಿರಾಜಪೇಟೆಯಿಂದ ಮೈಸೂರಿಗೆ ಬರುತ್ತಿತ್ತು. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.

LEAVE A REPLY

Please enter your comment!
Please enter your name here