ಭೀಕರ ಅಪಘಾತ

0
255

ಬಳ್ಳಾರಿ ಪ್ರತಿನಿಧಿ ವರದಿ
ಟ್ರ್ಯಾಕ್ಸ್ ಗೆ ಸರ್ಕಾರಿ ಬಸ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದ ಘಟನೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹುಲವತ್ತಿ ಗ್ರಾಮದ ಬಳಿ ಸಂಭವಿಸಿದೆ.
 
govt-bus_trayasr_accident
 
ಟ್ರ್ಯಾಕ್ಸ್ ನಲ್ಲಿದ್ದ ನಾಲ್ವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಸಂಬಂಧಿಯೊಬ್ಬರ ಅಂತ್ಯಕ್ರಿಯೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ದಾವಣಗೆರೆಯಿಂದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿ ಬಿ ಡ್ಯಾಂಗೆ ತೆರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ.
 
 
 
ಸರ್ಕಾರಿ ಬಸ್ ರಾಯಚೂರಿನಿಂದ ಭದ್ರಾವತಿಗೆ ತೆರಳುತ್ತಿತ್ತು. ಅಪಘಾತದ ಬಳಿಕ ಬಸ್ ಚಾಲಕ ಬಸ್ ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
 
ಮೃತರನ್ನು ಮೆಹಬೂಬ್ ಬಾಷಾ(50), ನೂರ್ ಮಹ್ಮದ್(42, ಕೌಸರ್ ಬಾನು(32), ನಸೀಯಾ ಬಾನು(55)ಮೃತ ದುರ್ದೈವಿಗಳಾಗಿದ್ದಾರೆ. ಟ್ರ್ಯಾಕ್ಸ್ ನಲ್ಲಿದ್ದ 7 ಜನರಿಗೆ ಗಾಯಗಳಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

LEAVE A REPLY

Please enter your comment!
Please enter your name here