ಭೀಕರ ಅಪಘಾತ: 3 ಸಾವು

0
270

ಹಾಸನ ಪ್ರತಿನಿಧಿ ವರದಿ
ವಿದ್ಯುತ್ ಕಂಬಕ್ಕೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ದುರ್ಮರಣ ಹೊಂದಿದ್ದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಪುಷ್ಪಗಿರಿ ಬೆಟ್ಟದ ಬಳಿ ಸಂಭವಿಸಿದೆ.
 
 
 
 
ಕ್ಯಾಂಟರ್ ನಲ್ಲಿದ್ದ ಶರೀಫ್ ಪಾಷ, ರತುಲ್ ಖಾನ್, ಶಾನ್ ಪಾಷ ಸಾವನ್ನಪ್ಪಿದ್ದ ದುರ್ದೈವಿಗಳಾಗಿದ್ದಾರೆ. ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
 
 
 
ಕ್ಯಾಂಟರ್ ನಲ್ಲಿದ್ದ ಎಲ್ಲರೂ ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿಗಳಾಗಿದ್ದಾರೆ. ಅಪಘಾತದಿಂದ ಕ್ಯಾಂಟರ್ ನಲ್ಲಿದ್ದ ಎರಡು ಎತ್ತುಗಳು ಕೂಡ ಸ್ಥಳದಲ್ಲೇ ಸಾವನ್ನಪ್ಪಿದೆ.
 
ಕ್ಯಾಂಟರ್ ಹೊಳೆನರಸೀಪುರದಿಂದ ಜಾನುವಾರುಗಳನ್ನು ಸಾಗಿಸುತ್ತಿತ್ತು. ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here