ಭೀಕರ ಅಗ್ನಿ ಆಕಸ್ಮಿಕ updated news

0
495

ಮುಂಬೈ ಪ್ರತಿನಿಧಿ ವರದಿ
 
10:00-ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ಸಿಬ್ಬಂದಿಗಳು ಕಟ್ಟದಲ್ಲಿದ್ದ 30 ಜನರನ್ನು ರಕ್ಷಿಸಿದ್ದಾರೆ. ಇನ್ನೂ 50ಕ್ಕೂ ಹೆಚ್ಚು ಜನ ಕಟ್ಟಡದಲ್ಲಿ ಸಿಲುಕಿರುವ ಶಂಕೆಯಿದೆ. ಒಟ್ಟು 12 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಕಟ್ಟಡ ಕೆಳಮಹಡಿಯಲ್ಲಿದ್ದ ಗಾರ್ಮೆಂಟ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿ 62 ಫ್ಲ್ಯಾಟ್ ಗಳಿರುವ ಮಾಹಿತಿ ಲಭ್ಯವಾಗಿದೆ.
ಮುಂಬೈನ ಭಿವಂಡಿ ಪ್ರದೇಶದಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಇಲ್ಲಿನ ಕಾಸಿಮ್ ಪುರದ 4 ಅಂತಸ್ತಿನ ವಸತಿ ಸಮುಚ್ಛಯದ ಕಟ್ಟಡದಲ್ಲಿ ಅಗ್ನಿ ಕಾಣಿಸಿಕೊಂಡಿದೆ.
 
 
ಈ ಕಟ್ಟಡದಲ್ಲಿ 150ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆಯಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆರು ವಾಹನಗಳಲ್ಲಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಟ್ಟಡದಲ್ಲಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿ ಧಗಧಗನೇ ಹೊತ್ತಿ ಉರಿದಿದೆ. ಬೆಂಕಿ ಇಡೀ ಕಟ್ಟಡವನ್ನೇ ಆವರಿಸಿರುವುದರಿಂದ ಸುತ್ತಮುತ್ತ ದಟ್ಟಹೊಗೆ ಆವರಿಸಿಕೊಂಡಿದೆ. ಇದರಿಂದ ಕಟ್ಟಡದ ಮೇಲಿದ್ದ ಜನರು ಪರದಾಡುತ್ತಿದ್ದಾರೆ.
ಇನ್ನು ಎರಡು ಮತ್ತು ಮೂರನೇ ಅಂತಸ್ತಿನಲ್ಲಿ ಮನೆಗಳಿದ್ದು, ಜನರು ವಾಸವಾಗಿದ್ದಾರೆ. ಕೆಳ ಅಂತಸ್ತಿನಲ್ಲಿ ಬೆಂಕಿ ಸಂಪೂರ್ಣವಾಗಿ ಆವರಿಸಿಕೊಂಡಿರುವ ಹಿನ್ನಲೆಯಲ್ಲಿ ಜನರು ಟೆರಸ್ ಮೇಲೆ ಹೋಗಿ ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here