ಭಾರೀ ದರೋಡೆ

0
348

 
ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡಿನಲ್ಲಿ ಸಿನಿಮೀಯ ರೀತಿಯಲ್ಲಿ ಭಾರೀ ದರೋಡೆ ನಡೆದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗೆ ಹಣ ಸಾಗಿಸಲಾಗುತ್ತಿತ್ತು.
 
 
ಚೆನ್ನೈನಿಂದ ಹೊರಟಿದ್ದ ರೈಲಿನಲ್ಲಿದ್ದ 300 ಕೋಟಿ ದರೋಡೆಯಾಗಿದೆ. 300 ಕೋಟಿ ಹಣ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗೆ ಸೇರಿದ್ದಾಗಿದೆ. ಸೇಲಂ ನಿಲ್ದಾಣಕ್ಕೆ ರೈಲು ಬಂದಾಗ ದರೋಡೆ ಕೃತ್ಯ ಬೆಳಕಿಗೆ ಬಂದಿದೆ. ರೈಲಿನ 2 ಬೋಗಿಗಳಲ್ಲಿ ಬ್ಯಾಂಕ್ ನ ಹಣ ಸಾಗಿಸಲಾಗುತ್ತಿತ್ತು.
 
 
 
ಕುಖ್ಯಾತ ದರೋಡೆಕೋರರಿಂದಲೇ ಈ ಕೃತ್ಯ ನಡೆದಿರುವ ಶಂಕೆಯಿದೆ. ಸಿನಿಮೀಯ ರೀತಿಯಲ್ಲಿ ಖದೀಮರು ದರೋಡೆ ಮಾಡಿದ್ದಾರೆ. ಆರ್ ಪಿ ಎಫ್ ಭದ್ರತೆ ನಡುವೆಯೂ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ.
 
 
 
ಖದೀಮರು ರೈಲಿನ ಬೋಗಿಗಳನ್ನು ಮೇಲಿನಿಂದ ಕತ್ತರಿಸಿ ಬೋಗಿಗೆ ಎಂಟ್ರಿ ಕೊಟ್ಟಿದ್ದಾರೆ. ಗ್ಯಾಸ್ ಕಟರ್ ಸಹಾಯದೊಂದಿಗೆ ರೈಲು ಬೋಗಿಗೆ ಪ್ರವೇಶಿಸಿದ್ದಾರೆ. ನಂತರ ಹಣದ ಬಾಕ್ಸ್ ಗಳನ್ನು ಹೊತ್ತೊಯ್ದಿದ್ದಾರೆ.
 
 
288 ಬಾಕ್ಸ್ ಗಳಲ್ಲಿ 300 ಕೋಟಿ ರೂಪಾಯಿ ಸಾಗಿಸಲಾಗುತ್ತಿತ್ತು. ಹಳೆಯ ಮತ್ತು ಹರಿದ ನೋಟುಗಳನ್ನು ಸಾಗಿಸಲಾಗುತ್ತಿತ್ತು.  ಈ ಕುರಿತು ತಮಿಳುನಾಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here