ಮೋದಿ ದಿಟ್ಟ ನಿರ್ಧಾರ- ಇಡೀ ಭಾರತ ಲಾಕ್ ಡೌನ್
ಮೂಡುಬಿದಿರೆ: 21ದಿನಗಳ ಕಾಲ ಇಡೀ ದೇಶವೇ ಲಾಕ್ ಡೌನ್. ಇದು ಮೋದಿ ಆರ್ಡರ್. ನಮ್ಮ ಒಳಿತಿಗಾಗಿ ನಾವು ಮಾಡಬೇಕಾದ ನಿರ್ಧಾರ ಇದು ಎಂಬುದು ಮೋದಿಯವರ ಆಶಯ. ಏ.15ರ ತನಕ ದೇಶವೇ ಲಾಕ್ ಡೌನ್ ಆಗಲಿದೆ. ಇಂದು ರಾತ್ರಿ 12ಗಂಟೆಯಿಂದಲೇ ಇದು ಜಾರಿಗೊಳ್ಳಲಿದೆ. ಒಟ್ಟು ಮೂರು ವಾರಗಳ ಕಾಲ ದೇಶ ಸ್ತಬ್ಧಗೊಳ್ಳಲಿದೆ. ಯಾರೂ ರಸ್ತೆಗೂ ಬರಬೇಡಿ ಮನೆಯಿಂದ ಹೊರಬರಲೇಬೇಡಿ ಇದು ವಿನಂತಿ. ಎರಡಬೇ ಬಾರಿ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿ ಈ ವಿಚಾರ ತಿಳಿಸಿದ್ದಾರೆ.
ಮನೆ ಬಾಗಿಲಿಗೆ ಲಕ್ಷ್ಮಣ ರೇಖೆ ಹಾಕಿ. ಶೇಕಡಾ ನೂರು ಸರಕಾರೀ ನಿರ್ದೇಶನ ಪಾಲಿಸಿ. ತನ್ಮೂಲಕ ಮಹಾಮಾರಿ ಕೊರೊನಾವನ್ನು ದೂರಮಾಡುವಲ್ಲಿ ಶಪಥ ಮಾಡಿಕೊಳ್ಳಿ ಎಂದು ನರೇಂದ್ರ ಮೋದಿ ವಿನಂತಿಸಿದರು. ದೇಶದ ಪ್ರತೀ ರಾಜ್ಯ, ಪ್ರತೀ ಜಿಲ್ಲೆ, ಪ್ರತೀ ಗ್ರಾಮವೂ ಲಾಕ್ ಡೌನ್ ಆಗಲೇ ಬೇಕು. ನಾಗರೀಕರು ಈ ನಿಟ್ಟಿನಲ್ಲಿ ಸರಕಾರದ ನೀತಿ ಅನುಸರಿಸಬೇಕೆಂದು ಅವರು ಕರೆನೀಡಿದ್ದಾರೆ. ದೇಶದಾದ್ಯಂತ ಕರ್ಫ್ಯೂ ಮಾದರಿಯಲ್ಲಿ ಈ ನೀತಿ ಜಾರಿಗೆ ಬರಲಿದೆ. ತನ್ಮೂಲಕ ಮಹಾಮಾರಿಯನ್ನು ಓಡಿಸಲು ಶಪಥ ಮಾಡಿಕೊಳ್ಳುವುದು ಅನಿವಾರ್ಯ ಎಂದವರು ಹೇಳಿದರು.