ಭಾರತ ಮತ್ತು ಮ್ಯಾನ್ಮಾರ್ ಗಡಿ ಭಾಗದಲ್ಲಿ ಭೂಕಂಪನ

0
219

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತ ಮತ್ತು ಮ್ಯಾನ್ಮಾರ್ ಗಡಿ ಭಾಗದಲ್ಲಿ ತಡರಾತ್ರಿ 12.20 ಸುಮಾರಿಗೆ ಭೂಕಂಪನವಾಗಿರುವುದಾಗಿ ರಾಷ್ಟ್ರೀಯ ಭೂಕಂಪ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.
 
 
 
ಅರುಣಾಚಲಪ್ರದೇಶ, ಭಾರತ-ಮ್ಯಾನ್ಯಾರ್ ಗಡಿ ಭಾಗ ಸೇರಿದಂತೆ ಈಶಾನ್ಯ ಭಾಗದ ಹಲವೆಡೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದೆ ಎಂದು ಬುಧವಾರ ತಿಳಿದುಬಂದಿದೆ.
 
 
 
ಅರುಣಾಚಲಪ್ರದೇಶದ ಕುರುಂಗ್ ಕುಮೇ ಜಿಲ್ಲೆಯಲ್ಲಿ ಬೆಳಗಿನ ಜಾವ 1:02 ಸುಮಾರಿಗ ಭೂಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ. ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರ, ನಾಗಾಲ್ಯಾಂಡ್, ಮಣಿಪುರದಲ್ಲಿ ಭೂಕಂಪನದ ಅನುಭವವಾಗಿರುವುದಾಗಿ ತಿಳಿದುಬಂದಿದೆ.
 
 
ಆಗರ್ತಲಾದಿಂದ 59 ಕಿ.ಮೀ ದೂರದಲ್ಲಿರುವ ಅಂಬಾಸಾ ಎಂಬ ಪ್ರದೇಶದಲ್ಲಿ ಭೂಕಂಪನದ ಕೇಂದ್ರ ಭಾಗ ಕಂಡುಬಂದಿದೆ.

LEAVE A REPLY

Please enter your comment!
Please enter your name here