ಭಾರತ-ತಾಂಜಾನಿಯಾ ಮಹತ್ವದ ಒಪ್ಪಂದಗಳಿಗೆ ಸಹಿ

0
248

 
ವರದಿ: ಲೇಖಾ
ಭಾರತ-ತಾಂಜಾನಿಯ ಉಭಯದೇಶಗಳು ವಿವಿಧ ರಂಗಗಳಲ್ಲಿ ಪರಸ್ಪರ ಸಹಕರಿಸುವ ಐದು ಮಹತ್ವದ ಒಪ್ಪಂದಗಳಿಗೆ ಸಹಿಹಾಕಿವೆ.
 
 
ಪ್ರಧಾನಿ ನರೇಂದ್ರ ಮೋದಿ ಹಾಗೂ ತಾಂಜಾನಿಯ ಅಧ್ಯಕ್ಷ ಜಾನ್ ಮಗುಫುಲಿ ಮಾತುಕತೆ ನಡೆಸಿದ ಬಳಿಕ ಉಭಯ ನಾಯಕರ ಸಮ್ಮುಖದಲ್ಲಿ ವಿವಿಧ ಒಪ್ಪಂದಗಳಿಗೆ ಸಹಿಮಾಡಿಕೊಳ್ಳಲಾಯಿತು.
 
 
ಈ ವೇಳೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಝಾಂಝಿಬಾರ್ ಪ್ರದೇಶದಲ್ಲಿ ನೀರು ಸರಬರಾಜು ವ್ಯವಸ್ಥೆಗಾಗಿ 920 ಲಕ್ಷ ಡಾಲರ್​ಗಳನ್ನು ಭಾರತದಿಂದ ಸಾಲವನ್ನು ಒದಗಿಸುವ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ, ಔಷಧ ಮತ್ತು ಔಷಧೋಪಕರಣ ಪೂರೈಕೆ ಸೇರಿದಂತೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಆದ್ಯತೆಯ ವಿಚಾರಗಳಲ್ಲಿ ತಾಂಜಾನಿಯ ಸರ್ಕಾರದ ಜೊತೆಗೆ ಸಹಕರಿಸಲು ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.
 
 
ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಭಯೋತ್ಪಾದನೆ ಮತ್ತು ಪರಿಸರ ಬದಲಾವಣೆ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರದಿಂದ ದುಡಿಯಲು ಉಭಯ ರಾಷ್ಟ್ರಗಳು ಪ್ರಯತ್ನಿಸುತ್ತವೆ ಎಂದು ಹೇಳಿದರು.
 
 
ತಾಂಜಾನಿಯಾದ 17 ನಗರಗಳಿಗೆ ನೀರು ಪೂರೈಕೆ ಕಾರ್ಯಗಳಲ್ಲೂ ನೆರವಾಗುವ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ. ಇದಕ್ಕಾಗಿ ರಿಯಾಯ್ತಿ ದರದಲ್ಲಿ 5000 ಲಕ್ಷ ಡಾಲರ್ ಹೆಚ್ಚುವರಿ ಸಾಲ ಒದಗಿಸುವ ಬಗ್ಗೆ ಭಾರತ ಪರಿಶೀಲನೆ ನಡೆಸಲಿದೆ ಎಂದು ಮೋದಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here